ಜಲಾವೃತ್ತಗೊಂಡ ಮುತ್ತಗಾ ಬ್ರಿಡ್ಜ್, ರಸ್ತೆ ಸಂಪರ್ಕ ಕಡಿತ : ಜನಜೀವನ ಅಸ್ತವ್ಯಸ್ತ 

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ತಾಲೂಕಿನಲ್ಲಿ ಕಾಗಿಣಾ ನದಿ ನೀರು ಹರಿವು ಸತತವಾಗಿ ಹೆಚ್ಚುತ್ತಿರುವುದರಿಂದ ಮುತ್ತಗಾ, ಗೋಳಾ ಕೆ, ಹಾಗೂ ಹೋನಗುಂಟಾ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಲಿದೆ, ಮುತ್ತಗಾ ಗ್ರಾಮದ ಕಾಗಿಣಾ ನದಿ ಸೇತುವೆ ಈಗಾಗಲೆ ಸಂಪೂರ್ಣ ಮುಳುಗಡೆ ಆಗಿ ಕದ್ದರಗಿ ಚಿತ್ತಾಪುರ, ಶಹಾಬಾದ ಸಂಪರ್ಕ ಕಡಿತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಅತೀ ಹೆಚ್ಚು ಮಳೆ ಮತ್ತು ನದಿಗೆ ನೀರು ಹರಿಸುವುದರಿಂದ ಪ್ರತಿ ಬಾರಿ ಈ ಗ್ರಾಮಗಳು ಪ್ರವಾಹದ ಭೀತಿ ಎದುರಿಸಬೇಕಾಗಿದೆ, ಈ ಬಾರಿ ಕೂಡ ಪ್ರವಾಹದ ಭೀತಿ ಜನರನ್ನು ಕಾಡುತ್ತಿದೆ. ಕೂಡಲೆ ಅಧಿಕಾರಿಗಳು ಮುಂಜಾಗ್ರತ ಕ್ರಮ ವಹಿಸಬೇಕಾಗಿರೋದು ಅವಶ್ಯಕವಾಗಿದೆ.

ಶಹಾಬಾದ ನಗರ ಮಡ್ಡಿ ಏರಿಯಾದ ಅಜನಿ ಹಳ್ಳದ ಹಳೆಯ ಸೇತುವೆ ಹಾಗೂ ರಸ್ತೆ ಸಂಪೂರ್ಣವಾಗಿ ಮುಳುಗಡೆ ಆಗಿರುವ ಕಾರಣ ಸಾರ್ವಜನಿಕರು ರೈಲ್ವೆ ಹಳಿಯ ಬ್ರಿಡ್ಜ್ ಮೇಲೆ ಅವಲಂಬನೆ ಆಗಿದ್ದಾರೆ. ಆಕಸ್ಮಿಕವಾಗಿ ಎರಡು ಬದಿ ರೈಲು ಬಂದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹಳ್ಳದ ನೀರು ಸಹಜವಾಗಿ ಹರಿದು ಹೋಗವ ಸ್ಥಳದಲ್ಲಿ ಗಣಿಗಾರಿಕೆ ಮತ್ತು ಗಣಿ ತ್ಯಾಜ್ಯವನ್ನು ಸುರವಿ ಒತ್ತುವರಿ ಮಾಡಿಕೊಂಡಿರುವ ಪರಿಣಾಮದಿಂದ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗಿದೆ ಹಾಗೂ ನಗರದ ಭೀಮಶಪ್ಪ ನಗರದ ರಾಜ್ಯ ಹೆದ್ದಾರಿ 125 ಸೇತುವೆ ಕಿರಿದಾಗಿರುವ ಪರಿಣಾಮ ನೀರು ಹರಿಯದೆ ಪಕ್ಕದ ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ. ಕೂಡಲೇ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!