Oplus_0

ಆ.28 ರಂದು ಶಹಾಬಾದ ಸಿಡಿಪಿಒ ಕಚೇರಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮುತ್ತಿಗೆ: ಮರಿಯಪ್ಪ ಹಳ್ಳಿ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಕರ್ತವ್ಯದಲ್ಲಿ ಲೋಪ ಮಾಡಿರುವ ಶಹಾಬಾದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿಡಿಪಿಒ ಕಚೇರಿಗೆ ಆ.28 ರಂದು ಮುತ್ತಿಗೆ ಹಾಕಿ ಸಾಂಕೇತಿಕ ಧರಣಿ ಮಾಡಲಾಗುವದು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವೇಶ್ವರ ನಗರದಲ್ಲಿರುವ ಸಿಡಿಪಿಒ ಕಚೇರಿಗೆ ಮುತ್ತಿಗೆ ಹಾಕಿ ಸಿಡಿಪಿಒ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಲಾಗುವುದು ಎಂದರು.

2021-22 ರಲ್ಲಿ 5 ಅಂಗನವಾಡಿ ಸಹಾಯಕರ ಅರ್ಜಿಗಳನ್ನು ಕರೆಯಲಾಗಿತ್ತು, ಅರ್ಜಿಗಳನ್ನು ಸ್ವೀಕರಿಸಿ ಅವರನ್ನು ಅಪಾಯಿಂಟ್ ಅಥವಾ ರಿಜೇಕ್ಟ್ ಮಾಡದೆ 3-4 ವರ್ಷ ಅರ್ಜಿಗಳನ್ನು ಹಾಗೆ ಉಳಿಸಿಕೊಂಡಿದ್ದಾರೆ, ಈಗಾಗಲೇ ಅರ್ಜಿದಾರರ ಪ್ರಕ್ರೀಯೆಯಲ್ಲಿ ಪ್ರಮಾಣ ಪತ್ರಗಳನ್ನು, ಅಭ್ಯರ್ಥಿಗಳ ಫೋಟೋ, ಜಿಪಿಎಸ್ ನ್ನು ನಗರಸಭೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಪೂರ್ಣಗೊಳಿಸಿದ್ದಾರೆ ಆದರೆ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕಿ ಮೀನಾಕ್ಷಿ ಹಾಗೂ ಸಿಡಿಪಿಒ ಕುತಂತ್ರದಿಂದಾಗಿ ಹೊಸ ಆಯ್ಕೆ ಆಗಿರುವುದಿಲ್ಲ, ಅಂಗನವಾಡಿ ಮಕ್ಕಳಿಗೆ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಅಪ್ರಾಪ್ತ ಬಾಲಕಿಯರಿಗೆ ನೀಡುತ್ತಿರುವ ಮೊಟ್ಟೆ ಹಾಗೂ ಆಹಾರ ಧಾನ್ಯಗಳು ನೀಡುವಲ್ಲಿ ವಂಚಿಸಿದ್ದಾರೆ ಎಂದರು.

ಸಿಡಿಪಿಒ ಅವರನ್ನು ಸಸ್ಪೆಂಡ್ ಮಾಡುವವರೆಗೂ ಹೋರಾಟ ನಿಲ್ಲುವುದಿಲ್ಲ ಡಿ.ಡಿ ಮತ್ತು ಡಿ.ಸಿ ಅವರು ಬರುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಲ್ಲಣ್ಣ ಮಸ್ಕಿ, ಸತೀಶ್ ಕೋಬಾಳಕರ, ನರಸಿಂಹಲು ರಾಯಚೂರಕರ್, ಮಲ್ಲಣ್ಣ ಮರತೂರ, ಚಂದ್ರಕಾಂತ್ ಪಾಟೀಲ, ಸುಭಾಷ್ ಸಾಕ್ರೆ, ಮೋಹನ ಹಳ್ಳಿ, ವೆಂಕಟೇಶ್ ಕುಶಾಲೆ, ಶಿವಶಾಲ್ ಪಟ್ಟಣಕರ್, ಮನೋಹರ್ ಕೋಳೂರು, ಮಲ್ಲಿಕಾರ್ಜುನ್ ಹಳ್ಳಿ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!