Oplus_0

ಚಿತ್ತಾಪುರ ಎಐ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ: ಕಾಶಿರಾಯ ಕಲಾಲ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ ಹಾಗೂ ಕನ್ಯಾ ಪ್ರೌಢ ಶಾಲೆಗೆ 2026-27ನೇ ಶೈಕ್ಷಣಿಕ ವರ್ಷದಿಂದ National Skills Qualifications Framework (NSQF) ಅಡಿಯಲ್ಲಿ Artificial Intelligence in Skill Education (AI) ವಿಷಯವನ್ನು ಅನುಷ್ಠಾನಗೊಳಿಸುವ ಸಂಬಂಧ ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರ ನೇಮಕಾತಿಗೆ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ ಎಂದು ಮುಖ್ಯಗುರು ಕಾಶಿರಾಯ ಕಲಾಲ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ದೇಶನ ಹಾಗೂ 2026-27ನೇ ಸಾಲಿನ ಪಿ.ಎ.ಬಿ. ಅನುಮೋದನೆಯನ್ವಯ National Skills Qualifications Framework-NSQF ಅಡಿಯಲ್ಲಿ Artificial Intelligence (AI in Skill Education) ವಿಷಯವನ್ನು ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಕೌಶಲ್ಯಗಳು, ಸಮಸ್ಯೆ ಪರಿಹಾರ ಸಾಮರ್ಥ್ಯ, ಸೃಜನಶೀಲತೆ, ತಾಂತ್ರಿಕ ಜ್ಞಾನ ಹಾಗೂ ಉದ್ಯೋಗಾರ್ಹತೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಣದೊಂದಿಗೆ ಸಂಯೋಜಿಸಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವವರಿಗೆ ಇದೇ ಜು.26 ಕೊನೆ ದಿನವಾಗಿದ್ದು ಜು.28 ರಂದು ಅಂತಿಮ ಆಯ್ಕೆ ಪಟ್ಟಿ ಸೂಚನಾ ಫಲಕದಲ್ಲಿ ಅಂಟಿಸಲಾಗುವುದು. ನೇಮಕಗೊಂಡ ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರಿಗೆ ಪ್ರತಿ ತಿಂಗಳು ರೂ. 20,000  ಗೌರವಧನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಶಾಲಾ ಮಟ್ಟದ ಆಯ್ಸಕೆ ಮಿತಿ ರಚನೆ: ಎಸ್.ಡಿ.ಎಂ.ಸಿ. ಅಧ್ಯಕ್ಷರು, ಮುಖ್ಯೋಪಾಧ್ಯಾಯರು, ಪಿಸಿಎಂ ಶಿಕ್ಷಕರು, ಐಐಟಿ, ಜಿಟಿಟಿಸಿ ಕೆಜಿಟಿಟಿಐ ಡಿಪ್ಲೊಮಾ ಪ್ರತಿನಿಧಿಗಳು, ಎಪಿಸಿಒ ವಿಷಯ ಪರಿವೀಕ್ಷಕರು, ಬಿಆರ್.ಸಿ, ಡಿಐಇಟಿ ಉಪನ್ಯಾಸಕರು.

AI ಅತಿಥಿ ಶಿಕ್ಷಕರ (Guest Teacher) ವಿದ್ಯಾರ್ಹತೆ:

ಕಂಪ್ಯೂಟರ್ ಸೈನ್ಸ್/ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಅಥವಾ ಕಂಪ್ಯೂಟರ್ ಅಪ್ಲಿಕೇಷನ್ಸ್/ಕಂಪ್ಯೂಟರ್ ಸೈನ್ಸ್/ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಪದವಿ (BCA, B.Sc. Computer Science, B.Sc. Information Technology) ಅಥವಾ PGDCA (Post Graduate Diploma in Computer Applications) ಹೊಂದಿರುವ ಪದವೀಧರರು ಅಥವಾ DOEACC ‘A’ ಲೆವೆಲ್ ಪ್ರಮಾಣಪತ್ರ. ಮೇಲೆ ತಿಳಿಸಲಾದ ವಿದ್ಯಾರ್ಹತೆಗಳು ಕನಿಷ್ಠ ಮಾನದಂಡಗಳಾಗಿವೆ; ಇದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ. ಕನಿಷ್ಠ ಸಾಮರ್ಥ್ಯಗಳು: ಸಂಬಂಧಿತ ಉದ್ಯೋಗದಲ್ಲಿ ಕನಿಷ್ಠ 1 ವರ್ಷದ ಕೆಲಸದ ಅನುಭವ; ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯ; ಈ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳು, ಪರಿಕರಗಳು, ಸಾಮಗ್ರಿಗಳು ಹಾಗೂ ಸುರಕ್ಷತೆ, ಆರೋಗ್ಯ ಮತ್ತು ನೈರ್ಮಲ್ಯದ ಪದ್ಧತಿಗಳ ಬಗ್ಗೆ ಜ್ಞಾನ; ತರಬೇತಿ ಮತ್ತು ಬೋಧನೆಗೆ ಅಗತ್ಯವಿರುವ ಮೂಲಭೂತ ಕಂಪ್ಯೂಟರ್ ಮತ್ತು ತಾಂತ್ರಿಕ ಕೌಶಲ್ಯಗಳು.

Spread the love

Leave a Reply

Your email address will not be published. Required fields are marked *

error: Content is protected !!