ಹೆಬ್ಬಾಳ ದಲಿತ ಮಾದಿಗ ಸಮನ್ವಯ ಸಮಿತಿಯ ಗ್ರಾಮ ಶಾಖೆ ಉದ್ಘಾಟನೆ | ಮಾದಿಗ ಸಮಾಜದ ಅಭಿವೃದ್ಧಿಗೆ ಒಗ್ಗೂಡಿ: ಲಿಂಗರಾಜ್ ತಾರಫೈಲ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸ್ವಾಭಿಮಾನವಿಲ್ಲದ ಮನುಷ್ಯ ಜೀವಂತ ಶವದಂತೆ ಎನ್ನುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವದಂತೆ ಸ್ವಾಭಿಮಾನಿಗಳಾಗಿ ಸಂಘಟಿತರಾಗಿ ಶಕ್ತಿ ಹೊಂದಿ ಸಮಾಜದ ಅಭಿವೃದ್ಧಿಗಾಗಿ ಕಂಕಣಬದ್ಧರಾಗಿ ಒಗ್ಗೂಡಿ ದುಡಿಯಬೇಕು ಎಂದು ದಲಿತ ಮಾದಿಗ ಸಮನ್ವಯ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಿಂಗರಾಜ್ ತಾರಫೈಲ್ ಹೇಳಿದರು.
ಮತಕ್ಷೇತ್ರದ ಹೆಬ್ಬಾಳ ಗ್ರಾಮದಲ್ಲಿ ದಲಿತ ಮಾದಿಗ ಸಮನ್ವಯ ಸಮಿತಿಯ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಯಿಂದಲೇ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ, ಹೀಗಾಗಿ ಪ್ರಜ್ಞಾವಂತ ಯುವಕರು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಮಿತಿಯ ಜಿಲ್ಲಾ ಪತ್ರಿಕಾ ಮಾಧ್ಯಮ ಪ್ರತಿನಿಧಿ ರವಿ ಬೆಳಮಗಿ ಮಾತನಾಡಿ, ಸಂಘಟನೆ ಮುಖಾಂತರ ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಮತ್ತು ಸಂಘಟಿತರಾಗಿ ಹೋರಾಡಲು ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ, ಮುನ್ನುಗ್ಗಲು ಸಂಘಟನೆ ಎಂಬುದು ಅಸ್ತ್ರವಾಗಿದೆ ಎಂದರು.
ರಾವೂರ ದಲಿತ ಮಾದಿಗ ಸಮನ್ವಯ ಸಮಿತಿಯ ಅಧ್ಯಕ್ಷ ಬಸವರಾಜ್ ನಡುವಿನಕೇರಿ, ಮಾದಿಗ ಸಮಾಜದ ಹಿರಿಯ ಮುಖಂಡ ಖಂಡೋಬಾ ಸಾಕ್ರೆ ಅವರು ವೇದಿಕೆಯಲ್ಲಿ ಇದ್ದರು.
ನೂತನ ಪದಾಧಿಕಾರಿಗಳು:
ಗೌರವಾಧ್ಯಕ್ಷರಾಗಿ ಮೈಲಾರಿ ಮಾಡಬೂಳ, ಅಧ್ಯಕ್ಷರಾಗಿ ಸಂಬಣ್ಣ ಮಾಂಗ್, ಉಪಾಧ್ಯಕ್ಷರಾಗಿ ಶ್ರೀಶೈಲ ರುಮನಗೂಡ್, ಪ್ರಧಾನ ಕಾರ್ಯದರ್ಶಿಯಾಗಿ ಮೈಲಾರಿ ಮಾಡಬೂಳ, ಸಹ ಕಾರ್ಯದರ್ಶಿ ರಾಜು ಮಾಡಬೂಳ, ಸಂಘಟನಾ ಕಾರ್ಯದರ್ಶಿ ಅನಿಲ್ ಮಾಂಗ್, ಖಚಾಂಚಿ ಸಂಬಣ್ಣ ಶಂಕರ್ ಮಾಂಗ್, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಚಂದ್ರಕಾಂತ್ ಮಾಂಗ್, ಅಣವೀರಪ್ಪ ರೂಮನಗೂಡ್, ದೇವೇಂದ್ರಪ್ಪ ತಡಕಲ್. ಬಸವರಾಜ್ ಮಾಂಗ್ ಅವರನ್ನು ಆಯ್ಕೆ ಮಾಡಲಾಗಿದೆ.

