Oplus_0

ಚಿತ್ತಾಪುರ ಆಶ್ರಯ ಕಾಲೋನಿಯ ಗಣೇಶನ ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿಯ ಶ್ರೀ ಗಜಾನನ ಯುವ ಮಂಡಳಿ ವತಿಯಿಂದ 9 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿದ ಶ್ರೀ ಗಣಪನಿಗೆ ಪ್ರತಿನಿತ್ಯ ವಿಶೇಷ ಪೂಜೆ ಹಾಗೂ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗುರುವಾರ ರಾತ್ರಿ ಅದ್ದೂರಿ ಮೆರವಣಿಗೆ ಮೂಲಕ ಹೊಸ ಕೋರ್ಟ್ ಹಿಂದುಗಡೆ ಇರುವ ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಯುವಕರ ನೃತ್ಯ ನೋಡುಗರ ಕಣ್ಮನ ಸೆಳೆಯಿತು.

ಗಜಾನನ ಯುವ ಮಂಡಳಿಯ ರವಿಚಂದ್ರ ದೊಡ್ಡಮನಿ, ನಾಗರಾಜ್ ಪೂಜಾರಿ, ಬಸವರಾಜ್ ಮೈನಾಳಕರ್,  ನಾಗರಾಜ್ ಕಾಶಿ, ಆಕಾಶ್ ತೆಂಗಳಿ, ಮಹೇಶ್, ಬಲ್ಲು, ರಾಜು, ಬನ್ನಪ್ಪ, ಶಿವು, ಸತೀಶ್, ಮಾದೇಶ್, ದೇವು, ಭೀಮು, ಆನಂದ್, ಮಲ್ಲು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!