Oplus_0

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿತ್ತಾಪುರ ತಾಲೂಕು ಪದಾಧಿಕಾರಿಗಳ ಆಯ್ಕೆ: ಮೌನೇಶ್ ಭಂಕಲಗಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾದ್ಯಕ್ಷ ವಾಸುದೇವ ಮೇಟಿ ಅವರ ಆದೇಶದ ಮೇರೆಗೆ ಚಿತ್ತಾಪುರ ತಾಲೂಕಿನ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಮೌನೇಶ್ ಕರದಾಳಕರ್ ಭಂಕಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನ ಪದಾಧಿಕಾರಿಗಳ ವಿವರ: 

ಡಾ.ಸಾಯಬಣ್ಣ ಗುಡುಗಾ ಇಂಗಳಗಿ (ಗೌರವ ಸಲಹೆಗಾರರು), ಶಾಂತಕುಮಾರ ಮಳಖೇಡ ಚಿತ್ತಾಪುರ (ಗೌರವಾಧ್ಯಕ್ಷರು), ಮೌನೇಶ್ ಕರದಾಳಕರ್ ಭಂಕಲಗಿ (ಅಧ್ಯಕ್ಷರು), ಶರಣು ಸಾಹು ತೊನಸನಳ್ಳಿ ಮೊಗಲಾ, ದಶರಥ ದೊಡಮನಿ ಚಿತ್ತಾಪುರ, ವಿಶ್ವರಾಜ್ ನನಕಿ ಸಾತನೂರ, ಕೀಶನ್ ಮೂಕೆ ದಂಡೋತಿ, ರಮೇಶ ಬೊಮ್ಮನಳ್ಳಿ, ಚಿತ್ತಾಪುರ (ಉಪಾಧ್ಯಕ್ಷರು), ಯಲ್ಲಯ್ಯ ಕಲಾಲ್ ಚಿತ್ತಾಪುರ (ಪ್ರಧಾನ ಕಾರ್ಯದರ್ಶಿ), ಬಸವರಾಜ ಇಂಗಳಗಿ ಸೂಲಹಳ್ಳಿ, ಹಣಮಯ್ಯ ಕಲಾಲ್ ಹೊಸ್ಸುರ್, ಸಂಗಣ್ಣ ನಾಟೀಕಾರ ಯರಗಲ್ (ಸಹ ಕಾರ್ಯದರ್ಶಿಗಳು), ಮಲ್ಲಿಕಾರ್ಜುನ ವಿಜಾಪುರಕರ್ ಅಲ್ಲೂರ.ಬಿ, ಶಂಕರಗೌಡ ಕೊಳ್ಳಿ ರಾಮತೀರ್ಥ (ಸಂಘಟನಾ ಕಾರ್ಯದರ್ಶಿಗಳು), ಶಿವರಾಮ್ ಚವ್ಹಾಣ ಚಿತ್ರಾಪುರ, ಬಸಲಿಂಗಪ್ಪಗೌಡ ದಂಡಗುಂಡ,  ಯಲ್ಲಾಲಿಂಗ ಪೂಜಾರಿ ಮರಗೋಳ (ಸಂಚಾಲಕರು), ಯಲ್ಲಾಲಿಂಗ ಸುಲ್ತಾನಪೂರ ಚಿತ್ತಾಪುರ (ಖಜಾಂಚಿ).

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವರಾಜ ಬಳಗಾರ ಹಣಿಕೇರಿ, ರಾಕೇಶ ಮುಗುಳನಾಗಾಂವ ಚಿತ್ತಾಪುರ, ವಿಶ್ವನಾಥ ಗುತ್ತೇದಾರ ಅಳ್ಳೋಳ್ಳಿ, ರಾಜಾಸಾಬ್ ಕರದಾಳ,  ಅಕ್ಷಯಕುಮಾರ ತಳವಾರ ಸಾತನೂರ, ಮಲ್ಲಿಕಾರ್ಜುನ ಮುಗುಟಿ ಸಾತನೂರ, ಮಲ್ಲಿಕಾರ್ಜನ ಮಲಬೊ ಭಂಕಲಗಿ, ಗೂಳಿನಾಥ ಡಿಗ್ಗಿ ಇಟಗಾ, ಚೆನ್ನಪ್ಪ ಮೂಲಿಮನಿ ಹೊಸ್ಸುರ್, ಹಾಜಿಸಾಬ್ ಮಣ್ಣಿನಗಡ್ಡಿ ಭಂಕಲಗಿ, ಅನೀಲಕುಮಾರ ನಡುವಿನಮನಿ ಚಾಮನೂರ, ಚಿತ್ತಾಪುರ ನಗರ ಅಧ್ಯಕ್ಷರಾಗಿ ವಿಠಲ್ ಕಟ್ಟಿಮನಿ ಚಿತ್ತಾಪುರ, ದಿಗ್ಗಾಂವ ವಲಯ ಅಧ್ಯಕ್ಷರಾಗಿ ಮಲ್ಲಪ್ಪ ಹೊನ್ನಪ್ಪನೋರ್ ಡೋಣಗಾಂವ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಕೂಡಲೇ ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಸಂಘಟನೆಯನ್ನು ಬಲ ಪಡಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ರೈತ ಪರ ಹೋರಾಟಗಳನ್ನು ಕೈಗೊಂಡು ತಾಲೂಕಿನಾದ್ಯಂತ ರೈತರ ದ್ವನಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಾಲೂಕು ಅಧ್ಯಕ್ಷ ಮೌನೇಶ್ ಕರದಾಳಕರ್ ಭಂಕಲಗಿ ಅವರು ಸೂಚಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!