Oplus_0

ಚಿತ್ತಾಪುರ ರವಿ ಸಿಮೆಂಟ್ ಏಜೆನ್ಸಿಯ 30 ನೇ ವಾರ್ಷಿಕೋತ್ಸವ ಮತ್ತು ಗ್ರಾಹಕರ ಸಮಾವೇಶ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಟ್ಟಡ ಕಾರ್ಮಿಕರ ಹಾಗೂ ಗ್ರಾಹಕರ ಸಹಕಾರದಿಂದ ಕಳೆದ 30 ವರ್ಷಗಳಿಂದ ಎಸಿಸಿ ಸಿಮೆಂಟ್ ಏಜೆನ್ಸಿಯನ್ನು ಮುನ್ನಡೆಸುವ ಮೂಲಕ ರವಿ ಪಾಟೀಲ ಇತಿಹಾಸ ನಿರ್ಮಿಸಿದ್ದಾರೆ ಎಂದು ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ಉಡುಪಿ ಹೊಟೇಲ್ ನಲ್ಲಿ ನಡೆದ ರವಿ ಸಿಮೆಂಟ್ ಏಜೆನ್ಸಿಯ 30 ನೇ ವಾರ್ಷಿಕೋತ್ಸವ ಸಮಾರಂಭ, ಗ್ರಾಹಕರ ಸಮಾವೇಶ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಎಸಿಸಿ ಸಿಮೆಂಟ್ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಿಮೆಂಟ್ ಆಗಿದೆ ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿದ ಎಸಿಸಿ ಮಾರುಕಟ್ಟೆ ವ್ಯವಸ್ಥಾಪಕ ಅಶುತೋಷ್ ಓಜಾ ಮಾತನಾಡಿ, ಎಸಿಸಿ ಸಿಮೆಂಟ್ ಕಂಪನಿ ಯಾವತ್ತೂ ರವಿ ಸಿಮೆಂಟ್ ಏಜೆನ್ಸಿಯವರಿಗೆ ಸಹಕಾರ ಹಾಗೂ ಪ್ರೋತ್ಸಾಹ ನೀಡುತ್ತಾ ಬಂದಿದೆ ಇಲ್ಲಿನ ಗ್ರಾಹಕರು ಸಹ ಅಷ್ಟೇ ಪ್ರೀತಿ ತೋರಿಸಿದ್ದರಿಂದಲೇ ಸುದೀರ್ಘ ಕಾಲ ಏಜೆನ್ಸಿ ಮುನ್ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಪೈಪೋಟಿ ಇದೆ ಇಂತಹ ಸಂದರ್ಭದಲ್ಲಿ ಕಳೆದ 30 ವರ್ಷಗಳಿಂದ ಸಿಮೆಂಟ್ ಏಜೆನ್ಸಿಯನ್ನು ಮುನ್ನಡೆಸುವ ಮೂಲಕ ಈ ಭಾಗದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದರು.

ರವಿ ಸಿಮೆಂಟ್ ಏಜೆನ್ಸಿಯ ಮಾಲಿಕ ರವಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕಟ್ಟಡ ಕಾರ್ಮಿಕರ ಹಿತೈಷಿಗಳ ಸಹಕಾರದಿಂದ ಕಳೆದ 30 ವರ್ಷಗಳಿಂದ ಎಸಿಸಿ ಸಿಮೆಂಟ್ ಏಜೆನ್ಸಿಯನ್ನು ಮುನ್ನಡೆಸಲು ಸಾಧ್ಯವಾಗಿದೆ ಈ ನಿಟ್ಟಿನಲ್ಲಿ ಬರುವ ಏಪ್ರಿಲ್ ತಿಂಗಳಲ್ಲಿ ಕಟ್ಟಡ ಕಾರ್ಮಿಕರ ಸಮಾವೇಶ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಂತ್ರಿಕ ವಿಭಾಗದ ರಮೇಶ್ ಪಾಟೀಲ, ಅಮರ ಕಾರಂಜಿ, ತಮ್ಮಣ್ಣ ಡಿಗ್ಗಿ, ಶರಣು ಜ್ಯೋತಿ, ಚಂದ್ರಶೇಖರ ಪಾಟೀಲ ಬೆಳಗುಂಪಾ, ಶಿವುಕುಮಾರ ಕಟ್ಟಿ, ಬಸವರಾಜ ಬೊಮ್ಮನಳ್ಳಿ, ವಿಶ್ವನಾಥ ಭಾಗೋಡಿ, ಸಂಗಮೇಶ ರೋಣದ್, ಶಶಿಧರ್ ಉಟಗೂರ, ನಾಗರಾಜ್ ರೇಷ್ಮಿ, ನಟರಾಜ್ ಶಿಲ್ಪಿ, ಬಸವರಾಜ ಸಂಕನೂರ, ಮಹೇಶ್ ಬಾಳಿ, ದೇವಿದಾಸ ಕುಲಕರ್ಣಿ, ವೀರಭದ್ರಪ್ಪ ಪಾಳದ್, ಸುರೇಂದ್ರ ಶೆಟ್ಟಿ, ಕಾಶಿರಾಯ ಕಲಾಲ್, ಬಸವರಾಜ ಬೊಮ್ಮನಳ್ಳಿ, ಲಿಂಗಣ್ಣ ಮಲ್ಕನ್, ಹಣಮಂತ ಕಾಶಿ, ಮೋನಯ್ಯ ಪಂಚಾಳ, ವಿಜಯಕುಮಾರ್ ಭಂಕಲಗಿ, ರಾಜು ಮರಗೋಳ ಸೇರಿದಂತೆ ಇತರರು ಇದ್ದರು. ವೀರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!