ಸರ್ಕಾರದ ಯೋಜನೆಗಳನ್ನು ಹಳ್ಳ ಹಿಡಿಸಿದ ವಾಡಿ ಪುರಸಭೆ: ವೀರಣ್ಣ ಯಾರಿ ಆರೋಪ

ನಾಗಾವಿ ಎಕ್ಸಪ್ರೆಸ್

ವಾಡಿ: ಮಹಿಳೆಯರ ಸ್ವಾವಲಂಬಿ ಬದುಕು ಸಾಗಿಸಲು ಅನುಷ್ಠಾನಗೊಳಿಸಿದ ಹೊಲಿಗೆ ಯಂತ್ರ ಹಾಗೂ ವಿಕಲಚೇತನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶ್ರೀಚಕ್ರ ವಾಹನ, ವೀಲ್ ಚೇರ್ ಸೇರಿದಂತೆ ಇತರೆ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ಕಲ್ಪಿಸಿ ಕೊಡುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಇದರಿಂದ ಸರ್ಕಾರದ ಯೋಜನೆಗಳು ಹಳ್ಳ ಹೀಡಿದಂತಾಗಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆರೋಪಿಸಿದ್ದಾರೆ.

ಬಡಜನರಿಗಾಗಿ ಬಂದಿರುವಂತ ಹೊಲಿಗೆ ಯಂತ್ರ, ತ್ರಿಚಕ್ರ ವಾಹನಗಳು ಸೇರಿದಂತೆ ವಿವಿಧ ಸೌಕರ್ಯ ವಸ್ತುಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿಟ್ಟಿದ್ದರಿಂದ ಅಲ್ಲಿಯೇ ಅವು ಕೊಳೆತು ತುಕ್ಕು ಹಿಡಿದಿವೆ ಈ ಕುರಿತು ಮೇಲಾಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇಲ್ಲಿನ ಜನಸಾಮಾನ್ಯರಿಗೆ ಶುದ್ಧ ನೀರು, ಶೌಚಾಲಯ, ಸ್ವಚ್ಛ ವಾತಾವರಣ ಒದಗಿಸದೇ ಜನರ ಆರೋಗ್ಯದ ಜೊತೆ ಪುರಸಭೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಸ್ವಚ್ಚತಾ ಅಭಿಯಾನದ ಅಂಗವಾಗಿ ಸುಮಾರು ಸಾವಿರಾರು ಕಸದ ಡಬ್ಬಿಗಳು ಬಂದಿವೆ ಅವುಗಳನ್ನು ಸಹ ವಿತರಿಸದೆ ಸಾರ್ವಜನಿಕ ಸಂಪತ್ತನ್ನು ಹಾಳು ಮಾಡುತ್ತಿದ್ದಾರೆ. ಮತ್ತೆ ಕಸದ ಡಬ್ಬಿಗಳಿಗೆ ಟೆಂಡರ್ ಕರೆಯುವ ಮಾಹಿತಿ ಬಂದಿದೆ. ಇಂತಹ ಹಗಲು ದರೋಡೆ ಮಾಡುವ ಅಧಿಕಾರಿಗಳಿಂದ ಪಟ್ಟಣದ ಅಭಿವೃದ್ಧಿ ಕನಸಿನ ಮಾತೆ ಆಗಿದೆ ಎಂದು ತಿಳಿಸಿದ್ದಾರೆ.

ಕಾಮಗಾರಿಗಳ ನೆಪದಲ್ಲಿ ನಕಲಿ ಬಿಲ್ ಗಳ ಮುಖಾಂತರ ಹಣ ಲಪಟಾಯಿಸುತ್ತಿರುವ ಅನುಮಾನ ದಟ್ಟವಾಗಿರುವ ಹಿನ್ನೆಲೆಯಲ್ಲಿ, ಮಾಹಿತಿ ಹಕ್ಕಿನ ಮೂಲಕ ಪುರಸಭೆ ನಿಧಿಯಿಂದ ಕೈಗೊಂಡ ಕಾಮಗಾರಿಗಳ ಮಾಹಿತಿ ಕೇಳಿ ಒಂದು ತಿಂಗಳು ಕಳೆದರು ಇನ್ನೂ ಕೊಟ್ಟಿಲ್ಲ. ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿನ ತ್ಯಾಜ್ಯ ಸಂಸ್ಕರಣ ಘಟಕಗಳಿದ್ದು,ಅದರಿಂದ ಕಸವನ್ನು ಬೇರ್ಪಡಿಸಿ ರೈತರಿಗೆ ಕಡಿಮೆ ದರದಲ್ಲಿ ಗೊಬ್ಬರ ತಯಾರಿಸಿ ಕೂಡುವ ಯಂತ್ರಗಳನ್ನು ಬಳಸದೆ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅವೈಜ್ಞಾನಿಕವಾಗಿ ಕಸವನ್ನು ಸುಟ್ಟು ವಾತಾವರಣ ಕಲುಷಿತ ಗೊಳಿಸಿ, ಜನರನ್ನು ಅನಾರೋಗ್ಯಕ್ಕೆ ದೂಡುತ್ತಿದ್ದಾರೆ. ಈ ರೀತಿಯ ಅನೇಕ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗೆ ಬೇಜವಬ್ದಾರಿತನ ತೋರುತ್ತಿರುವುದರಿಂದ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದೆ. ಇದೆಲ್ಲಾ ಮಾಧ್ಯಮಗಳ ಮೂಲಕ ಜಿಲ್ಲಾಧಿಕಾರಿ ಗಳಿಗೆ ಮತ್ತು ಸಂಭಂದಿಸಿದ ಮೇಲಾಧಿಕಾರಿಗಳಿಗೆ ಗಮನಕ್ಕೆ ತಲುಪಿದರು, ಕ್ರಮಕೈಗೊಳ್ಳದೆ ಸುಮ್ಮನಿರುತ್ತಿರುವುದು ಯಾಕೆ ಅಂತ ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಜನಸಾಮಾನ್ಯರ ಮೂಲಭೂತ ಸೌಕರ್ಯಗಳನ್ನು ಕಸಿಯುತ್ತಿರುವ ಪುರಸಭೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸರ್ಕಾರದಿಂದ ಬಂದಂತ ಹೊಲಿಗೆ ಯಂತ್ರ, ತ್ರಿ ಚಕ್ರ ವಾಹನಗಳನ್ನು ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ನೀಡಿದೆ ಪುರಸಭೆ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮೇಲಾಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು”.-ವೀರಣ್ಣ ಯಾರಿ ಅಧ್ಯಕ್ಷರು ಬಿಜೆಪಿ ವಾಡಿ.

 

 

Spread the love

Leave a Reply

Your email address will not be published. Required fields are marked *

error: Content is protected !!