ಗಾಂಧಿ, ಶಾಸ್ತ್ರೀಜಿ ಅವರ ಜಯಂತಿ ನಿಮಿತ್ತ ಓರಿಯಂಟ್ ಕಂಪೆನಿಯಿಂದ ಸ್ಟೇಷನ್ ತಾಂಡಾದಲ್ಲಿ ಸಸಿ ನೆಡುವ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿ ನಿಮಿತ್ತ ಸ್ಟೇಷನ್ ತಾಂಡಾದ ಸೇವಾಲಾಲ್ ಭವನ ಹತ್ತಿರ ಓರಿಯಂಟ್ ಸಿಮೆಂಟ್ ಕಂಪನಿ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಪುರಸಭೆ ಸದಸ್ಯ ಜಗದೀಶ್ ಚವ್ಹಾಣ ಮಾತನಾಡಿ, ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವ ಉದ್ದೇಶದಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಸಹಕರಿಸಿದ ಓರಿಯಂಟ್ ಸಿಮೆಂಟ್ ಕಂಪನಿ ಮುಖ್ಯಸ್ಥ ಸತ್ಯಬ್ರತ್ ಶರ್ಮಾ ಹಾಗೂ ಸಿವಿಲ್ ಡಿಪಾರ್ಟ್ಮೆಂಟ್ ಮುಖ್ಯಸ್ಥ ಶಿವಬಸಪ್ಪ ನಂದಿಯಾಲ್ ಅವರಿಗೆ ಹಾಗೂ ಲೆಜನಿಂಗ್ ಡಿಪಾರ್ಟ್ಮೆಂಟ್ ಮುಖ್ಯಸ್ಥ ತಿರುಪತಿ ಚವ್ಹಾಣ, ಸಿವಿಲ್ ಡಿಪಾರ್ಟ್ಮೆಂಟ್ ನಾ ವಿನಯಕುಮಾರ್ ಅವರ ಕಾರ್ಯ ಮೆಚ್ಚುವಂಥದ್ದು ಎಂದು ಹೇಳಿದರು.
ಸ್ಟೇಷನ್ ತಾಂಡಾದ ರುದ್ರ ಭೂಮಿಯಲ್ಲಿ, ಸೇವಾಲಾಲ್ ದೇವಸ್ಥಾನದಲ್ಲಿ, ಬಂಜಾರ ಭವನದ ಸುತ್ತಮುತ್ತಲು ಹಾಗೂ ಮುಖ್ಯ ರಸ್ತೆಯಲ್ಲಿ ಸಸಿ ನೆಡಲು ಮನವಿಯನ್ನು ಸಲ್ಲಿಸಲಾಗಿತ್ತು, ನಮ್ಮ ಮನವಿಗೆ ಸ್ಪಂದಿಸಿ ಸಸಿ ನೆಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲಕ್ಷ್ಮಣ್ ವಿಠ್ಠಲ್ ನಾಯಕ್, ಸೇವಾಲಾಲ್ ಜಗದಂಬ ದೇವಿ ದೇವಸ್ಥಾನ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಹಾಗು ಕಾಂಗ್ರೆಸ್ ಯುವ ಉಪಾಧ್ಯಕ್ಷ ದೇವದಾಸ್ ಚವ್ಹಾಣ, ನವರಾತ್ರಿ ಉತ್ಸವ ಸಮಿತಿಯ ಖಜಾಂಚಿ ಪ್ರತಾಪ್ ಚವ್ಹಾಣ, ವೆಂಕಟೇಶ್ ಕನ್ನು ಚವ್ಹಾಣ ಸೋಮಲಿಬಾಯಿ ಜಾಧವ, ಲಖನ್ ಚವ್ಹಾಣ, ಈಶ್ವರ ಸಂಜು ರಾಠೋಡ್, ರಾಮ ರಾಠೋಡ್ ಇತರರು ಇದ್ದರು.