ಎಂಎಲ್ಸಿ ಸಿ.ಟಿ ರವಿ ಹೇಳಿಕೆಗೆ ಹಡಪದ ಸಮಾಜ ಖಂಡನೆ, ಕೂಡಲೇ ಕ್ಷಮೆಯಾಚಿಸಲು ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಚಿಕ್ಕಮಂಗಳೂರು ಮೆಡಿಕಲ್ ಕಾಲೇಜಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಬೇಟಿ ಕೊಟ್ಟಿರುವಂತ ಸಂದರ್ಭದಲ್ಲಿ ನಿಷೇಧಿತ ಹಜಾಮ್ ಪದವನ್ನು ಬಳಸಿ ಹಡಪದ ಸಮಾಜದ 25 ಲಕ್ಷ ಕ್ಷೌರಿಕ ಜನರನ್ನು ಅಪಮಾನಿಸಿದಕ್ಕೆ ಹಡಪದ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ತಾಲೂಕು ಅಧ್ಯಕ್ಷ ರಮೇಶ ಹಡಪದ ಕೊಲ್ಲೂರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಹಡಪದ ಕ್ಷೌರಿಕ ಸಮಾಜವನ್ನು ಅವಮಾನ ಮಾಡಲೇಬೇಕು ಎನ್ನುವ ಉದ್ದೇಶದಿಂದ ಇದು ಸತತವಾಗಿ ಎರಡನೇ ಸಲ ಬುದ್ಧಿ ಇಲ್ಲದ ರಾಜಕಾರಣಿ ಬಿಜೆಪಿ ಶಾಸಕ ಸಿ ಟಿ ರವಿ ಅವರು ಕ್ಷೌರಿಕ ವೃತ್ತಿಯ ಬಗ್ಗೆ ಕೀಳು ಭಾವನೆ ಹೊಂದಿರುವ ಇತ ಯಾವ ದೇಶ ಭಕ್ತ? ಈತ ನಿಜಕ್ಕೂ ರಾಜಕೀಯ ನಾಯಕನಾಗುವುದಕ್ಕೆ ಅರ್ಹತೆ ಹೊಂದಿಲ್ಲ. ಇಂತಹ ಕೀಳು ಭಾವನೆ ರಾಜಕಾರಣಿಯಾದ ಸಿಟಿ ರವಿ ಅವರನ್ನು ಎಂಎಲ್ಸಿ ಸ್ಥಾನದಿಂದ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹಡಪದ ಸಮಾಜದ ವೃತ್ತಿ ಹಾಗೂ ಜಾತಿಯ ಭಾವನೆಗಳನ್ನು ಕೆರಳಿಸಿ ನಿಷೇಧಿತ ಪದ ಬಳಸಿ ಅಪಮಾನ ಗೊಳಿಸಿದ ಸಿ.ಟಿ ರವಿ ಅವರ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಿ.ಟಿ ರವಿಯವರು ಸುಂದರವಾಗಿ ಕಾಣುತ್ತಿರುವುದಕ್ಕೆ ಹಡಪದ ಕ್ಷೌರಿಕ ಸಮಾಜವೇ ಕಾರಣ ಇದನ್ನು ಮರೆಯಬೇಡಿ, ಇದೊಂದು ಪುಣ್ಯದ ಕೆಲಸ, ಕರ್ಮ ಕಳೆಯುವ ಕೆಲಸ, ನಿಷೇಧಿತ ಪದ ಬಳಸುವ ಮೂಲಕ ಹಡಪದ ಸಮಾಜಕ್ಕೆ ಅವಮಾನ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಈ ಕೂಡಲೇ ಮಾಜಿ ಸಚಿವ ಹಾಲಿ ಎಂಎಲ್ಸಿ ಸಿ.ಟಿ ರವಿ ಅವರು ರಾಜ್ಯದ ಹಡಪದ ಸಮಾಜದ ಕ್ಷಮೆ ಕೇಳಬೇಕು ಎಂದು ಚಿತಾಪುರ ತಾಲೂಕ ಹಡಪದ ಸಮಾಜ ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಮುರಳಿಕುಮಾರ್ ಸಾತನೂರ, ವಾಡಿ ನಗರ ಅಧ್ಯಕ್ಷ ಅಶೋಕ್ ಚೌಕಿ, ಹಿರಿಯರಾದ ಕಲ್ಯಾಣಿ ಗುಂಡುಗುರ್ತಿ, ಶೇಖಣ್ಣ ದಂಡಗುಂಡ ಹಾಗೂ ಸಮಾಜದ ಬಂಧುಗಳು, ಯುವಕರು ಇದ್ದರು.

