Oplus_0

ಶಿಕ್ಷಕಿ ಮಾಯಾದೇವಿ ರೋಣದ ವಯೋ ನಿವೃತ್ತಿ  ಬೀಳ್ಕೊಡುಗೆ ಸಮಾರಂಭ | ಶಿಕ್ಷಕ ವೃತ್ತಿಗೆ ಗೌರವ ತಂದುಕೊಟ್ಟ ಮಾಯಾದೇವಿ ಸೇವೆ ಅಮೋಘ: ಅಲ್ಲಮಪ್ರಭು ಪಾಟೀಲ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರಾಮಾಣಿಕತೆ, ನಿಷ್ಠೆ ಮತ್ತು ಶ್ರದ್ಧೆಯಿಂದ ಸೇವೆ ಸಲ್ಲಿಸಿ ಶಿಕ್ಷಕ ವೃತ್ತಿಗೆ ಗೌರವ ತಂದುಕೊಟ್ಟ ಶಿಕ್ಷಕಿ ಮಾಯಾದೇವಿ ಅವರ‌ ಸೇವೆ ಅಮೋಘವಾಗಿದೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಿಗ್ಗಾಂವ ರೋಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ‌ ಸಹಶಿಕ್ಷಕಿ ಮಾಯಾದೇವಿ ರೇವಣಸಿದ್ದಪ್ಪ ರೋಣದ ಇವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ಮಾಯಾದೇವಿ ಅವರು ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. 27 ವರ್ಷದ ಸೇವಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಮಾಯಾದೇವಿ ರೇವಣಸಿದ್ದಪ್ಪ ರೋಣದ ದಂಪತಿಗಳ ಸೇವೆ ಅಮೋಘವಾಗಿದೆ ಎಂದು ಬಣ್ಣಿಸಿದರು. ಈ ಭಾಗದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಅನೇಕ ಮಕ್ಕಳ ಭವಿಷ್ಯ ರೂಪಿಸಿದ್ದಾರೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಸೊನ್ನ ವಿರಕ್ತ ಮಠದ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು, ರಾವೂರ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಡಾ.ರಾಚೋಟೇಶ್ವರ ಶಿವಾಚಾರ್ಯರು, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಉದ್ಯಮಿ ಸೋಮಶೇಖರ ಪಾಟೀಲ್ ಬೆಳಗುಂಪಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಬಿಸಿಯೂಟ ಅಧಿಕಾರಿ ಶಂಕರ ಡಾಂಗೆ, ಮಲ್ಲಿಕಾರ್ಜುನ ಸೇಡಂ, ಶಿವಶರಣಪ್ಪ ಮಂಠಾಳೆ, ಪ್ರಮುಖರಾದ ರಾಜಶೇಖರ್ ಸೀರಿ ಚಂದ್ರಶೇಖರ ಅವಂಟಿ, ಈರಪ್ಪ ಭೋವಿ, ಅನ್ನಪೂರ್ಣ ಹೊತ್ತಿನಮಡಿ, ಮಲ್ಲಿಕಾರ್ಜುನ ಕಾಳಗಿ, ಸಂತೋಷ್ ಚೌದರಿ, ರಾಜಶೇಖರ್ ಬೊಮ್ಮನಳ್ಳಿ, ವಿಜಯಕುಮಾರ್ ರೋಣದ, ಶರಣಬಸಪ್ಪ ಶಿವಪೂಜೆ, ಪ್ರಭುದೇವ ಬೊಮ್ಮನಳ್ಳಿ, ಗುರುಲಿಂಗಪ್ಪ ಮುಲಿಗೆ, ಅಬ್ದುಲ್ ಸಲೀಂ, ಶಿವಲಿಲಾ, ಹಣಮಂತ ಕೆರಪ್ಪ, ಡಾ ಚಂದ್ರಶೇಖರ ಕಾಂತಾ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಶಿವಕಾಂತ ಬೆಣ್ಣೂರಕರ್, ಪರಮೇಶ್ವರ ಪಂಚನಕರ್, ಅರುಣಕುಮಾರ, ಓಂಕಾರೇಶ್ವರ ರೇಷ್ಮೆ,  ವೀರಭದ್ರಪ್ಪ ಗುರುಮಠಕಲ್, ತಮನ್ನಾ ಕೌಸರ್ ಸೇರಿದಂತೆ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಮಾಯಾದೇವಿ ರೇವಣಸಿದ್ದಪ್ಪ ರೋಣದ ದಂಪತಿಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಮುಖಂಡರು ಸೇರಿದಂತೆ ಅಭಿಮಾನಿಗಳು, ವಿದ್ಯಾರ್ಥಿಗಳು, ಪಾಲಕರು ಸನ್ಮಾನಿಸಿ ಗೌರವಿಸಿದರು. ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ರೇವಣಸಿದ್ದಪ್ಪ ರೋಣದ್ ಸ್ವಾಗತಿಸಿದರು, ಶಿವಾನಂದ ನಾಲವಾರ ನಿರೂಪಿಸಿದರು, ಸಂಗಮೇಶ ರೋಣದ್ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!