ವಾಡಿ ಪಟ್ಟಣದಲ್ಲಿ ವಂದೇ ಮಾತರಂಗೆ 150 ವರ್ಷ: ಭಾರತ ಮಾತೆಗೆ ಜಯ ಘೋಷಿಸಿ ಗೌರವಿಸಿದ ಬಿಜೆಪಿ ಮುಖಂಡರು
ನಾಗಾವಿ ಎಕ್ಸಪ್ರೆಸ್
ವಾಡಿ: ಬಿಜೆಪಿ ಕಚೇರಿಯಲ್ಲಿ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ಮುಖಂಡರು ಭಾರತಾಂಬೆಗೆ ಪುಷ್ಪ ನಮನ ಸಲ್ಲಿಸಿ, ಸಾಮೂಹಿಕವಾಗಿ ವಂದೇ ಮಾತರಂ ಜಯ ಘೋಷ ಕೂಗಿ ಸಂಭ್ರಮಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ‘ವಂದೇ ಮಾತರಂ’ ಎಂಬುದು ಕೇವಲ ಒಂದು ದೇಶಭಕ್ತಿ ಗೀತೆಯಲ್ಲ, ಬದಲಿಗೆ ಅಂದಿನ ಬ್ರಿಟಿಷ್ ಆಡಳಿತದ ವಿರುದ್ಧ ಸಮಸ್ತ ಭಾರತೀಯರನ್ನು ಒಗ್ಗೂಡಿಸುವ ಒಂದು ಶಕ್ತಿ ಗೀತೆಯಾಗಿ ಪ್ರಚಲಿತಗೊಂಡಿತ್ತು ಎಂದು ಹೇಳಿದರು.
ಆಗಿನ ಒಂದು ಪರಿಸ್ಥಿತಿಯಲ್ಲಿ ಜನರಿಗೆ ದೇಶ ಭಕ್ತಿ ಪರಿಕಲ್ಪನೆ ಇರಲಿಲ್ಲ. ಆಗ ರಚನೆಯಾದ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನದಿಂದ ಜನರಲ್ಲಿ ದೇಶ ಪ್ರೇಮ, ಭಕ್ತಿ, ಭಾವನೆ ಹುಟ್ಟಿಕೊಳ್ಳಲು ಅನುಕೂಲವಾಯಿತು. ಭಾರತ ಮಾತೆಯ ಸಮೃದ್ಧತೆಯನ್ನು ಮತ್ತು ಇಲ್ಲಿನ ವೈವಿಧ್ಯತೆಯನ್ನು ಸಮರ್ಥವಾಗಿ ಶತಮಾನಗಳ ಕಾಲ ಬಿಂಬಿಸುವ ಸಾಮರ್ಥ್ಯವನ್ನು ಈ ಗೀತೆ ಅಂದಿನಿಂದ ಇಂದಿನವರೆಗೂ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭೀಮಶಾ ಜೀರೊಳ್ಳಿ, ಹರಿ ಗಲಾಂಡೆ, ಶರಣಗೌಡ ಚಾಮನೂರ, ಭೀಮರಾವ ದೊರೆ, ಶಿವಶಂಕರ ಕಾಶೆಟ್ಟಿ, ಪ್ರಕಾಶ ಪುಜಾರಿ, ಕಿಶನ ಜಾಧವ, ಅಂಬದಾಸ ಜಾಧವ, ಸುಭಾಷ ರದ್ದೆವಾಡಿ ಚಾಮನೂರ, ಮಹೇಂದ್ರ ಕುಮಾರ ಪುಜಾರಿ, ಮಲ್ಲಿಕಾರ್ಜುನ ಸಾತಖೇಡ, ರವಿ ಚವ್ಹಾಣ, ಸೂರಜ್ ರಾಠೊಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ ಸೇರಿದಂತೆ ಇತರರು ಇದ್ದರು.

