ತೊಗರಿ ಪ್ರತಿ ಕ್ವಿಂಟಾಲ್ ಗೆ 12 ಸಾವಿರ ಬೆಂಬಲ ಬೆಲೆ ನಿಗದಿ ಮಾಡುವಂತೆ ಜೆಡಿಎಸ್ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ರೈತರ ತೊಗರಿ ಬೆಳೆ ದಾರಣಿ ಪ್ರತಿ ಕ್ವಿಂಟಾಲ್ ಗೆ ಬೆಂಬಲ ಬೆಲೆ 12 ಸಾವಿರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಜೆಡಿಎಸ್ ಮುಖಂಡರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಜೆಡಿಎಸ್ ತಾಲೂಕು ಮಾಜಿ ಅಧ್ಯಕ್ಷ ನಾಗಣ್ಣ ಎಸ್. ವಾರದ್ ದಂಡೋತಿ ಮಾತನಾಡಿ, ಚಿತ್ತಾಪೂರ ತಾಲೂಕಿನಲ್ಲಿ ರೈತರ ತೊಗರಿ ಬೆಳೆ ಮಳೆಯಿಂದ ಮತ್ತು ಪ್ರವಾಹದಿಂದ ಮತ್ತು ಅತಿವೃಷ್ಟಿಯಿಂದ ರೈತರು ಬೆಳೆದ ತೊಗರಿ ಬಹಳ ನಷ್ಟವಾಗಿರುತ್ತದೆ. ಆದಕಾರಣ ರೈತರು ಬಹಳ ಸಂಕಷ್ಟದಲ್ಲಿ ಇದ್ದಾರೆ ಎಂದು ಹೇಳಿದರು.
ಮಾಜಿ ಉಪಾಧ್ಯಕ್ಷ ಭೀಮಣ್ಣ ದಂಡಗುಂಡ ಮಾತನಾಡಿ, ಕೈಯಿಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ, ರೈತನ ಅಳಲು ಯಾರು ಕೇಳದಂತಾಗಿದೆ. ರೈತ ಬೆಳೆದ ತೊಗರಿ ಧಾರಣಿ ಪ್ರತಿ ಕ್ವಿಂಟಾಲ್ ಗೆ 12000 ರೂಪಾಯಿ ಬೆಂಬಲ ಬೆಲೆ ನಿಗಧಿ ಪಡಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಮಾಜಿ ಕಾರ್ಯಧ್ಯಕ್ಷ ಅಂಬದಾಸ ಆರ್. ಚವ್ಹಾಣ, ಮುಖಂಡರಾದ ಹುಸೇನ್ ಸಾಬ್ ಹುಳಂಡಗೇರಾ, ಬಸರೆಡ್ಡಿ ಅಳ್ಳೋಳ್ಳಿ, ಅಬ್ದುಲ್ ಗಫೂರ್ ಸಾಬ್, ಅಬ್ದುಲ್ ಲತೀಫ್, ತೋಟೇಂದ್ರ ಅಲ್ಲೂರ.ಬಿ ಸೇರಿದಂತೆ ಇತರರು ಇದ್ದರು.

