ಕೋಮು ಗಲಭೆ ಎಬ್ಬಿಸುವ ನೋಂದಣಿ ಇಲ್ಲದ ಆರ್.ಎಸ್.ಎಸ್ ರದ್ದುಗೊಳಿಸುವಂತೆ ಆಗ್ರಹಿಸಿ ಡಿಎಸ್ಎಸ್ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದೇಶದಲ್ಲಿ ಕೋಮು ದ್ವೇಷ ಸೃಷ್ಟಿಸಿ ಜಾತಿ ಜಾತಿಗಳ ನಡುವೆ ಕೋಮು ಗಲಭೆ ಎಬ್ಬಿಸುವ ನೋಂದಣಿ ಇಲ್ಲದ ಆರ್.ಎಸ್.ಎಸ್ ಸಂಘಟನೆಯನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಮುಖಂಡರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.
ಜಿಲ್ಲಾ ಖಜಾಂಚಿ ದೇವಿಂದ್ರ ಕುಮಸಿ ಮಾತನಾಡಿ, ಇತ್ತಿಚಿಗೆ ಆರ್‌ಎಸ್‌ಎಸ್ 100 ವರ್ಷ ಪೂರೈಸಿದೆ ಎಂದು ಕಾನೂನು ಬಾಹಿರವಾಗಿ ತನಗೆ ಬೇಕಾದ ಹಾಗೆ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಮುಂಗಡವಾಗಿ ಅನುಮತಿ ಇಲ್ಲದೆ ತನಗೆ ಬೇಕಾದ ಸ್ಥಳಗಳಲ್ಲಿ ಪಥ ಸಂಚಲನ ಮಾಡಿ ತೊಂದರೆ ಕೊಡುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಅನುಮತಿ ಇಲ್ಲದೆ ಸರ್ಕಾರಿ ಇತರೆ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಕೊಡಬಾರದೆಂದು ಸರ್ಕಾರಕ್ಕೆ ಪತ್ರ ಬರೆದ ಪ್ರಯುಕ್ತ ಒಬ್ಬ ಮನುವಾದಿ ಆರ್‌ಎಸ್‌ಎಸ್ ಕಾರ್ಯಕರ್ತ ಪ್ರಿಯಾಂಕ್ ಖರ್ಗೆ ರವರನ್ನು ವಾಟ್ಸಾಪ್ ನಲ್ಲಿ ಅಶ್ಲೀಲ ಶಬ್ದ ಬಳಿಸಿದಲ್ಲದೆ ಅವರ ಪೋನಿಗೆ ಕರೆ ಮಾಡಿ ಜೀವ ಬೇದರಿಕೆ ಹಾಕಿದರು. ಇಂತಹ ಕೀಳು ಮಟ್ಟದ ಮನಸ್ಥಿತಿ ಹೊಂದಿರುವ ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಮತ್ತು ಇಂತಹ ಮನುವಾದಿಗಳ ವಿರುದ್ಧ ಎದೆಗೊಟ್ಟು ಮುನ್ನಡೆಯಬೇಕು, ಮುಷ್ಟಿ ಬಿಗಿ ಹಿಡಿದು ಧಿಕ್ಕಾರ ಹೇಳಬೇಕು. ಚಾರ್ತುವರ್ಣ ಭಾರತವನ್ನು ಕಟ್ಟಲು ಹೊರಟ ಸಂಘ ಪರಿವಾರದ ಹಗಲುಗನಸು ಹುಸಿಯಾಗಿಸಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಪಣ ತೊಡಬೇಕಿದೆ ಎಂದು ಹೇಳಿದರು.
ಹಿಂದೂ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕು ನೀಡಲು ಬಯಸಿದ್ದ ಹಿಂದೂ ಕೋಡ್ ಬಿಲ್ ಜಾರಿಯಾಗಲು ಅಂಬೇಡ್ಕರ್ ಹೋರಾಡುತ್ತಿದ್ದರೆ ಅದರ ಪ್ರತಿಯನ್ನು ಸುಟ್ಟು ಹಾಕಿ ಆರ್.ಎಸ್.ಎಸ್ ವಿಕೃತಿ ಮೆರೆದಿತ್ತು ಇತ್ತಿಚೆಗೆ ಭಾರತದ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಗವಾಯಿ ರವರ ಮೇಲೆ ಶೂ ಎಸೆಯಲಾಗಿತ್ತು. ಆ ಕೃತ್ಯ ಮಾಡಿದ ವಕೀಲ ರಾಕೇಶ ಕಿಶೋರ ಸನಾತನ ಧರ್ಮ ಉಳಿಸಲು ಶೂ ಎಸೆದೆ ಎಂದು ಎದೆ ಉಬ್ಬಿಸಿ ಹೇಳುತ್ತಾನೆ. ಭಾರತ ದೇಶದಲ್ಲಿ ಆತನ ವಕೀಲನಾಗಿದ್ದು ಮನುಸ್ಮೃತಿಯಿಂದಲೊ? ಅಥವಾ ಸಂವಿಧಾನದಿಂದಲೊ ಎಂದು ಪ್ರಶ್ನಿಸಿದರು.
ತಾಲೂಕು ಸಂಚಾಲಕ ಮೋನಪ್ಪ ನಡಗೇರಿ ಮಾತನಾಡಿ, ಭಾರತ ಸಂವಿಧಾನದ ಮೇಲೆ ಯುದ್ಧ ಸಾರಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿ ರವರ ಆಟ ಅತೀರೇಖಾವಾಗಿದೆ, ಇಂತಹ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸದೇ ಇದ್ದರೆ ಭಾಗ್ಯವಿದಾತ ಭಾರತವನ್ನು ಬಲಿಭಾರತವಾಗಿಸುತ್ತಾರೆ ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಹೆಸರು ಇಡಬೇಕು, ಸಚಿವ ಪ್ರಿಯಾಂಕ್ ಖರ್ಗೆ ಯವರಿಗೆ ಕರೆ ಮಾಡಿ ಅಶ್ಲೀಲ ಪದ ಬಳಸಿ ಹಾಗೂ ಜೀವ ಬೆದರಿಕೆ ಹಾಕಿದವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿ ಪಡಿಸಬೇಕು, ಉದ್ದೇಶ ಪೂರ್ವಕವಾಗಿ ಚಿತ್ತಾಪುರನ್ನು ಗುರಿಯಾಗಿ ಇಟ್ಟುಕೊಂಡು ಪಥಸಂಚಲನ ಮಾಡಲು ಹೊರಟ ಆರ್.ಎಸ್.ಎಸ್ ಕಾರ್ಯಕ್ರಮಕ್ಕೆ ಸರಕಾರ ಅನುಮತಿ ನೀಡಬಾರದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಧೀಶರಾದ ಬಿ.ಆರ್ ಗವಾಯಿ ಯವರ ಮೇಲೆ ಶೂ ಎಸೆದ ವಕೀಲನನ್ನು ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕರಾದ ರವಿ ಸಿಂಗೆ, ಕುಶಾಲಕುಮಾರ ನಾಟೇಕರ್, ಶಿವಕುಮಾರ ಹಾರಬೋಳ, ಶಿವಯೋಗಿ ಕಾಗಿ, ಶರಬಣ್ಣ ಸನ್ನತಿ, ಸೋಮನಾಥ ಕೊಂಚೂರ, ಜೈವಂತ ಭಂಕಲಗಿ, ಚಂದ್ರಕಾಂತ ನಾಟೇಕರ್, ಶಿವಲಿಂಗ ಕನಗನಹಳ್ಳಿ, ಬಾಬು ಬಂದಳ್ಳಿ, ಹಾಜಪ್ಪ ಸಾತನೂರು, ವಿಶ್ವನಾಥ ಹಾದಿಮನಿ, ಸ್ವಾಮಿ ಭಾವಿ ಸೇರಿದಂತೆ ಇತರರು ಇದ್ದರು.

