Oplus_0

ಚಿತ್ತಾಪುರ ಸಾರ್ವಜನಿಕರ ಹಿತದೃಷ್ಟಿಯಿಂದ ಬೋರವೆಲ್ ಲೋಕಾರ್ಪಣೆ: ನಜೀರ್ ಆಡಕಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪುರಸಭೆ ವಾರ್ಡ್ ನಂ.17 ರಲ ತೀನ್ ಮಳಗಿ ಏರಿಯಾದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ 15 ನೇ ಹಣಕಾಸು ಯೋಜನೆಯ 1 ಲಕ್ಷ ಅನುದಾನದಲ್ಲಿ ಕೈಗೊಂಡ ಬೋರವೆಲ್ ವನ್ನು ಕಾಂಗ್ರೆಸ್ ಯುವ ಮುಖಂಡ ನಜೀರ್ ಆಡಕಿ ಲೋಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಈ ಏರಿಯಾದಲ್ಲಿ ನೀರಿನ ಸಮಸ್ಯೆ ಇರುವುದನ್ನು ಗಮನಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಲು ಪುರಸಭೆಯ 15 ನೇ ಹಣಕಾಸು ಯೋಜನೆಯಡಿ ಬೋರವೆಲ್ ಹಾಕಿಸಲಾಗಿದೆ ಎಂದು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಅಭಿವೃದ್ಧಿ ಪರ ಇರುವುದರಿಂದ ನಮ್ಮ ವಾರ್ಡ್ ಗೆ ಹಾಗೂ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅವರ ಸಹಕಾರದಿಂದ ನಮ್ಮ ವಾರ್ಡ್ ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಎಂ.ಎ.ರಷೀದ್, ನ್ಯಾಯವಾದಿ ಪ್ರಸಾದ್ ಅವಂಟಿ, ಇಕ್ಬಾಲ್ ಅಹ್ಮದ್, ಇಬ್ರಾಹಿಂ ಸೇರಿದಂತೆ ಇತರರು ಇದ್ದರು

Spread the love

Leave a Reply

Your email address will not be published. Required fields are marked *

error: Content is protected !!