Oplus_0

ಮಾಡಬೂಳ ಗ್ರಾಮದಲ್ಲಿ ಜನ್ಮದಿನದ ನಿಮಿತ್ತ ಅನ್ನ ಸಂತರ್ಪಣೆ, ಗಡಿಯಾರ ವಿತರಣೆ | ಪ್ರಿಯಾಂಕ್ ಖರ್ಗೆ ರಾಜ್ಯ ಕಂಡ ಪ್ರಬುದ್ಧ ರಾಜಕಾರಣಿ: ಸುನೀಲ್ ದೊಡ್ಡಮನಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಕಂಡ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ ಎಂದು ಅಪೇಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ ಹೇಳಿದರು.

ಮತಕ್ಷೇತ್ರದ ಮಾಡಬೂಳ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹುಟ್ಟುಹಬ್ಬದ ನಿಮಿತ್ತ ಅನ್ನ ಸಂತರ್ಪಣೆ ಹಾಗೂ ಗಡಿಯಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದಾ ಅಭಿವೃದ್ಧಿ ಪರ ಚಿಂತನೆ ಮಾಡುವ ಹಾಗೂ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ. ಇಂದು ಸಚಿವರ ಜನ್ಮದಿನದ ಅಂಗವಾಗಿ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಅನ್ನಸಂತರ್ಪಣೆ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಹೆಣ್ಣು ಹಂಪಲು ವಿತರಣೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ನಡೆದಿವೆ ಅದರಲ್ಲೂ ಈ ಭಾಗದಲ್ಲಿ ಶಿವಯ್ಯ ಗುತ್ತೇದಾರ ಗಡಿಯಾರ ವಿತರಣೆ ಮಾಡಿರುವ ಕಾರ್ಯ ವಿಶೇಷ ಎಂದು ಹೇಳಿದರು.

ಪೇಟಶಿರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವಯ್ಯ ಗುತ್ತೇದಾರ ಮಾತನಾಡಿ, ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಲ್ಲದೇ ಮೂರು ಬಾರಿ ಸಚಿವರಾಗಿ ತಮ್ಮ ಕೆಲಸಕಾರ್ಯಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡು ರಾಜ್ಯ ಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು. ಸಚಿವರ ಜನ್ಮದಿನದ ಪ್ರಯುಕ್ತ ಸಚಿವ ಪ್ರಿಯಾಂಕ್ ಖರ್ಗೆ, ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಇರುವ ಒಂದು ಸಾವಿರ ಗೋಡೆ ಗಡಿಯಾರ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ಉದ್ಯಮಿ ಯಲ್ಲಾಲಿಂಗ ಪೂಜಾರಿ ಮುಗಟಾ, ತಾಪಂ ಮಾಜಿ ಸದಸ್ಯ ಬಸವರಾಜ ಹೊಸಳ್ಳಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಮುಖಂಡರಾದ ಮಾಣಿಕ್ ಸಿಂಧೆ, ಶಾಂತಕುಮಾರ್ ಪಾಟೀಲ ಬೆಣ್ಣೂರ, ಸಂತೋಷ ಹಿರೇಮನಿ, ಸುರೇಶ್ ಗುತ್ತೇದಾರ, ಕಲ್ಯಾಣ್ ಸಿಂಗ್, ಹಮೀದ್ ಪಟೇಲ್, ಸಿದ್ದು ಪಾಟೀಲ್, ಗುಂಡುಗೌಡ ಹದನೂರು, ಹಣಮಂತ ಯೇಳಿಮನಿ, ಶಿವುಕುಮಾರ ಹಿರೇಮನಿ, ರತ್ನಾಕರ್ ಕನ್ನಡಗಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!