ಚಿತ್ತಾಪುರ ತಾಲೂಕು ವೈಜ್ಞಾನಿಕ ಸಂಶೋಧನಾ ಪರಿಷತ್ತು ತಾಲುಕು ಸಮಿತಿ ಪುನರ್ ರಚನೆ: ಶಾಂತಕುಮಾರ್ ಮಳಖೇಡ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ತಾಲುಕು ಸಮಿತಿ ಪುನರ್ ರಚನೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಶಾಂತಕುಮಾರ್ ಮಳಖೇಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಶಿನಾಥ ಗುತ್ತೇದಾರ (ಗೌರವಾಧ್ಯಕ್ಷರು), ಶಾಂತಕುಮಾರ್ ಮಳಖೇಡ (ಅಧ್ಯಕ್ಷ ರು), ಡಾ.ಸಂತೋಷ ಎಲ್ಹೇರಿ, ಸೋಮಶೇಖರ್ ಕಲ್ಲಶೆಟ್ಟಿ (ಉಪಾಧ್ಯಕ್ಷರು), ಲತಾ ಎಸ್.ಇಂಗಳಗಿ (ಮಹಿಳಾ ಉಪಾಧ್ಯಕ್ಷರು), ನರಸಪ್ಪ ಚಿನ್ನಾಕಟ್ಟಿ (ಪ್ರಧಾನ ಕಾರ್ಯದರ್ಶಿ), ವೀರುಪಾಕ್ಷರುದ್ರ ಬೆಣ್ಣಿ (ಸಹ ಕಾರ್ಯದರ್ಶಿ), ರಾಮಣ್ಣ ಡೋಣಗಾಂವ (ಸಂಘಟನಾ ಕಾರ್ಯದರ್ಶಿ), ಕಾಶಿರಾಯ ಕಲಾಲ್ (ಕೋಶಾಧ್ಯಕ್ಷರು), ನರಸಿಂಹ ಆಲಮೇಲಕರ್ (ಪುರುಷ ಸಂಚಾಲಕರು), ಶ್ರೀದೇವಿ ಬೆಣ್ಣಿ (ಮಹಿಳಾ ಸಂಚಾಲಕರು), ನಿರ್ದೇಶಕರಾಗಿ ಮೋಹಿನ್ ಸಾತನೂರು, ರವಿಶಂಕರ ಬುರ್ಲಿ, ಸುರೇಶ ಬೆನಕನಳ್ಳಿ, ಜಗದೇವ ಕುಂಬಾರ, ಚಂದ್ರಶೇಖರ ಶೇರಿ, ಅನಂತ್ ದೇಶಪಾಂಡೆ, ಶಿವರಾಮ್ ಚವ್ಹಾಣ, ಪರಶುರಾಮ್ ಕಂದಗಲ್, ಜಗನ್ನಾಥ ಮುಡಬೂಳಕರ್, ಡೇವಿಡ್ ಸ್ಯಾಮವೇಲ್, ಮೋಹನ ಬೆಂಜಿ, ಉಮಾಕಾಂತ ಶರ್ಮಾ, ಸಾಬಣ್ಣ ಕಲಬುರ್ಗಿ, ಶ್ರೀನಿವಾಸ ಜಗಲಿಮನಿ, ಚಂದ್ರಶೇಖರ ಬಳ್ಳಾ ಅವರು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಧ ಅವಧಿಯಲ್ಲಿ ತಾಲೂಕಿನಲ್ಲಿ ಮೂಡನಂಬಿಕೆ ಹಾಗೂ ಕಂದಾಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ವಿಭಿನ್ನ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಪ್ರಾಮಾಣಿಕ ಕೆಲಸ ಮಾಡಲಾಗಿದೆ. ಇದಕ್ಕೆ ತಾಲೂಕಿನ ಪ್ರಜ್ಞಾವಂತ ಜನರು ಸಹಕರಿಸಿದ್ದಾರೆ, ಮುಂದೆಯೂ ಗ್ರಾಮೀಣ ಭಾಗದ ಮುಗ್ಧ ಹಾಗೂ ಅನಕ್ಷರಸ್ಥ, ಅವಿದ್ಯಾವಂತ ಜನರಲ್ಲಿ ಅರಿವು ಮೂಡಿಸುವ ವಿಭಿನ್ನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು ಈ ಜಾಗೃತಿ ಕಾರ್ಯಕ್ರಮಗಳಿಗೆ ಸಹಕರಿಸಬೇಕು ಎಂದು ಶಾಂತಕುಮಾರ್ ಮಳಖೇಡ ಮನವಿ ಮಾಡಿದ್ದಾರೆ.
