ಸ್ವದೇಶಿ ಹೋರಾಟಗಾರ ರಾಜೀವ ದೀಕ್ಷಿತ್ ಅವರ 58 ನೇ ಜಯಂತ್ಯೋತ್ಸವ | ಸ್ವದೇಶಿ ಚಿಂತನೆ ಜೀವನದ ಭಾಗವಾಗಬೇಕು: ಮಹೇಶ್ ಬೀದರಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜೀವ ದೀಕ್ಷಿತ್ ಅವರ ಸ್ವದೇಶಿ ಚಿಂತನೆ ಕೇವಲ ವಿಚಾರವಾಗಿ ಉಳಿಯದೆ ಪ್ರತಿಯೊಬ್ಬರ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸ್ವದೇಶಿ ಚಿಂತಕ ಮಹೇಶ್ ಆರ್. ಬೀದರಕರ್ ಹೇಳಿದರು.
ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ರಾಜೀವ ದೀಕ್ಷಿತ್ ವಿಚಾರ ವೇದಿಕೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ಸಂತ ಹಾಗೂ ಸ್ವದೇಶಿ ಹೋರಾಟಗಾರ ರಾಜೀವ ದೀಕ್ಷಿತ್ ಅವರ 58 ನೇ ಜಯಂತ್ಯೋತ್ಸವ ಹಾಗೂ 15 ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಉತ್ಪನ್ನಗಳ ಬಳಕೆ, ನೈಸರ್ಗಿಕ ಆಹಾರ ಪದ್ಧತಿ ಮತ್ತು ಸರಳ ಜೀವನ ಶೈಲಿಯೇ ಆರೋಗ್ಯಕರ ಹಾಗೂ ಸ್ವಾವಲಂಬಿ ಬದುಕಿನ ಮೂಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಸಾಯನಿಕ ಆಹಾರ ಹಾಗೂ ವಿದೇಶಿ ಅವಲಂಬನೆ ಸಮಾಜದ ಮೇಲೆ ಪರಿಣಾಮ ಬೀರುತ್ತಿದ್ದು, ರಾಜೀವ ದೀಕ್ಷಿತರ ಆಲೋಚನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸ್ವದೇಶಿ ಚಿಂತಕ ನಾಗಣ್ಣ ಇವಣಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪ್ರಾಂತ ಸೇವಾ ಸಹ ಪ್ರಮುಖರು (ವಿ.ಹಿಂ.ಪ) ಕರ್ನಾಟಕ ಉತ್ತರ ಅಂಬರೀಶ ಜಿ ಸುಲೇಗಾಂವ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಂತೋಷ ಹಾವೇರಿ, ಶಿವಕುಮಾರ ಘವಾರಿಯಾ, ಮುನಿ ಕಡಬುರ್, ಅಶ್ವಿನ್ ಉಮಿಯಾಜಿ, ನಟರಾಜ ಶಿಲ್ಪಿ, ಸುವರ್ಣ ಶಿಲ್ಪಿ, ಜ್ಯೋತಿ ಮುಗಳಿ, ಸಾಬಣ್ಣ ಪೂಜಾರಿ, ಮಲ್ಲಣ್ಣ ಮಾಸ್ಟರ್ ಮುಡಬೂಳ್, ಮನೋಹರ ಹಡಪದ, ಬಸವರಾಜ ಗೌಡ ಆಲೂರ್, ಮಲ್ಲಿಕಾರ್ಜುನ ಪಲ್ಲೇದ ಸೇರಿದಂತೆ ರಾಜೀವ ದೀಕ್ಷಿತ ವಿಚಾರ ವೇದಿಕೆ ಚಿತ್ತಾಪುರ ಹಾಗೂ ಅಭಿಮಾನಿ ಬಳಗದ ಸದಸ್ಯರು, ಹಲವಾರು ಜನರು ಉಪಸ್ಥಿತರಿದ್ದರು.
ರಾಜೀವ ದೀಕ್ಷಿತ್ ವಿಚಾರ ವೇದಿಕೆಯ ಅಧ್ಯಕ್ಷ ವೀರಣ್ಣ ಶಿಲ್ಪಿ ಪ್ರಾಸ್ತಾವಿಕ ನುಡಿಗಳನ್ನು ಆಡಿ ಕಾರ್ಯಕ್ರಮ ನಿರೂಪಿಸಿದರು.

