Oplus_0

ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ 65 ನೇ ಜನ್ಮದಿನಾಚರಣೆ, ಮಾತಂಗಿಯರಿಗೆ ಸೀರೆ ವಿತರಣೆ | ನಾಗರೆಡ್ಡಿ ಪಾಟೀಲ ಕರದಾಳ ಹಲವು ಸಾಧನೆಗಳ‌ ರೂವಾರಿ: ಕಂಬಳೇಶ್ವರ ಶ್ರೀ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರು ಪಟ್ಟಣದ ಕೇಂದ್ರ ಸ್ಥಾನದಲ್ಲಿ ಬಸವೇಶ್ವರ ಮೂರ್ತಿ ಸ್ಥಾಪನೆ ಮಾಡಿರುವುದು, ಬಸವ ಜಯಂತಿ ಹಾಗೂ ಉಚಿತ ಸಾಮೂಹಿಕ ವಿವಾಹ ಹಾಗೂ ಮುಖ್ಯ ರಸ್ತೆಯಲ್ಲಿ ವಿಶ್ವಗುರು ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡುವ ಮೂಲಕ ಹಲವು ಸಾಧನೆಗಳ‌ ರೂವಾರಿ ಆಗಿದ್ದಾರೆ ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಅಭಿಮಾನಿಗಳ ಬಳಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರ 65 ನೇ ಜನ್ಮದಿನಾಚರಣೆ ಹಾಗೂ ಮಾತಂಗಿಯರಿಗೆ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರೆಡ್ಡಿ ಪಾಟೀಲ ಕರದಾಳ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಮೂಲಕ ಶಿಕ್ಷಣ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ತಾಲೂಕಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಉನ್ನತ ಮಟ್ಟದ ಸ್ಥಾನಮಾನಕ್ಕೆ ಹೋಗಲಿ ಎಂದು ಶುಭಹಾರೈಸಿದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ನನ್ನದೇ ಆದ ಕೆಲವು ಸಿದ್ದಾಂತಗಳಿವೆ ಹೀಗಾಗಿ ಮೊದಲಿಂದಲೂ ನನ್ನ ಜನ್ಮದಿನವನ್ನು ಯಾವತ್ತೂ ಆಚರಿಸಿಕೊಂಡಿಲ್ಲ ಈ ಬಾರಿ ಅಭಿಮಾನಿಗಳ ಪ್ರೀತಿ ಹಾಗೂ ಒತ್ತಡಕ್ಕೆ ಮಣಿದು ಶಾಲು ಸನ್ಮಾನ ಸ್ವೀಕರಿಸಿದ್ದೇನೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹುಟ್ಟುಹಬ್ಬಕ್ಕೆ ದುಂದುವೆಚ್ಚ ಮಾಡದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ಎಂದು ಕರೆ ಕೊಟ್ಟ ಮಾರ್ಗದಲ್ಲಿಯೇ, ನನ್ನ ಜನ್ಮದಿನವನ್ನೂ ಸಹ ನಾನು ಯಾವುದೇ ದುಂದು ವೆಚ್ಚ ಮಾಡದೇ ಶಾಲಾಕಾಲೇಜುಗಳಿಗೆ ಪುಸ್ತಕಗಳನ್ನು ದೇಣಿಗೆ ನೀಡುವ ಮೂಲಕ ವಿದ್ಯಾರ್ಥಿಗಳ ಓದಿಗೆ ಹಾಗೂ ಜ್ಞಾನಾರ್ಜನೆಗೆ ಸಹಕರಿಸಿ ಎಂದು ಹೇಳಿದರು.

ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೆಣ್ಣೂರಕರ್, ಪ್ರಮುಖರಾದ ಅಣ್ಣಾರಾವ ಪಾಟೀಲ ಮುಡಬೂಳ, ಜಗದೀಶ್ ಚವ್ಹಾಣ, ಶ್ರೀನಿವಾಸ ರೆಡ್ಡಿ ಪಾಲಪ್, ರಸೂಲ್ ಮುಸ್ತಫಾ,  ಸಂತೋಷ ಚೌದರಿ, ಅಶೋಕ ನಿಪ್ಪಾಣಿ, ಶರಣಪ್ಪ ನಾಟೀಕಾರ, ಹಣಮಂತ ಸಂಕನೂರ, ರಾಮಲಿಂಗ ಬಾನರ್, ಭೀಮಸಿಂಗ ಚವ್ಹಾಣ, ನಿಂಗಣ್ಣ ಹೆಗಲೇರಿ, ಶಿವಾಜಿ ಕಾಶಿ, ಸುರೇಶ್ ಬೆನಕನಳ್ಳಿ, ಸುರೇಶ್ ಅಳ್ಳೋಳ್ಳಿ, ಶ್ರೀಮಂತ ಗುತ್ತೇದಾರ, ಶಾಮ್ ಮುಕ್ತೇದಾರ, ಮಲ್ಲಿಕಾರ್ಜುನ ಪೂಜಾರಿ, ಅಹ್ಮದ್ ಸೇಟ್, ಚಂದ್ರಶೇಖರ ಉಟಗೂರ, ಅನೀಲ್ ವಡ್ಡಡಗಿ, ಶಂಕರ ಲೀಡರ್, ವಿಜಯಕುಮಾರ್ ಯಾಗಾಪೂರ, ಸುಭಾಷ್ ಅವಂಟಿ ಸಾತನೂರು, ಭೀಮರಾಯ ಹೊತಿನಮಡಿ, ನಿಂಗಾರೆಡ್ಡಿ ಭೀಮನಳ್ಳಿ, ಚಂದ್ರು ಕಾಳಗಿ, ಮಲ್ಲಿಕಾರ್ಜುನ ಪಡಶೆಟ್ಟಿ, ರವಿ ಗೊಬ್ಬುರ್, ಯಂಕಪ್ಪ ಭೀಮನಳ್ಳಿ, ಬನ್ನೇಶ್ ಸುಲೇಗಾಂವ, ಕರಣು ಅಲ್ಲೂರ, ಅಂಬು ಹೋಳಿಕಟ್ಟಿ, ಭಾಗು ದೊರೆ ಸೇರಿದಂತೆ ಇತರರು ಇದ್ದರು. ನಾಗರಾಜ ಭಂಕಲಗಿ ನಿರೂಪಿಸಿ ವಂದಿಸಿದರು. ಬಸವೇಶ್ವರ ವೃತ್ತ ಹಾಗೂ ಬಸ್ ನಿಲ್ದಾಣದ ಹತ್ತಿರ ಅಭಿಮಾನಿಗಳು ಅನ್ನದಾಸೋಹ ಮಾಡಿದರು.

Spread the love

Leave a Reply

Your email address will not be published. Required fields are marked *

error: Content is protected !!