ಮೊಗಲಾ ಮೌರ್ಯವರ್ಧನ್ ದೊರೆ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಪುಸ್ತಕಗಳು ಹಾಗೂ ಪೆನ್ನುಗಳು ವಿತರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮದ ಮೌರ್ಯವರ್ಧನ್ ದೊರೆ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಮುಖ್ಯ ಗುರುಗಳ ಮುಖಾಂತರ ಪುಸ್ತಕಗಳು ಹಾಗೂ ಪೆನ್ನುಗಳು ವಿತರಿಸಲಾಯಿತು.
ಪ್ರತಿಯಾಗಿ ಶಾಲೆಯ ವಿದ್ಯಾರ್ಥಿಗಳು ಹುಡುಗರೆಯನ್ನು ಕೊಟ್ಟು ಹುಟ್ಟುಹಬ್ಬದ ಶುಭ ಕೋರಿದರು. ಈ ಸಂದರ್ಭದಲ್ಲಿ ಮುಖ್ಯಗುರು ಸುರೇಶ್ ಸರಾಫ್, ಸಹಶಿಕ್ಷಕ ಶಿವುಕುಮಾರ, ಸಹಶಿಕ್ಷಕಿ ಸಾಬಮ್ಮ, ಪಾಲಕರಾದ ಭಾಗು ದೊರೆ, ಮಹೇಶ್ವರಿ ದೊರೆ ಸೇರಿದಂತೆ ಇತರರು ಇದ್ದರು.

