Oplus_0

ಕಾಳಗಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಪ್ರಾರಂಭ | ಜ.3 ಕ್ಕೆ ವೈಭವದ ರಥೋತ್ಸವ, ಜ 4 ಕ್ಕೆ ವಿಶೇಷ ಪಲ್ಲಕ್ಕಿ ಉತ್ಸವ

ನಾಗಾವಿ ಎಕ್ಸಪ್ರೆಸ್ 

ಕಾಳಗಿ: ಪಟ್ಟಣದ ಆರಾಧ್ಯ ದೇವತೆಯಾದ ಜಗನ್ಮಾತೆ ತಾಯಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಜ. 3 ಕ್ಕೆ ವೈಭವದ ರಥೋತ್ಸವ ಹಾಗೂ ಜ.4 ಕ್ಕೆ ವಿಶೇಷ ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಗಣೇಶ ಸಿಂಗಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿ. 28 ಭಾನುವಾರ ದಿಪೋತ್ಸವ, ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು, ಡಿ. 29 ದಿಂದ ಜ. 2 ರವರೆಗೆ ಪ್ರತಿದಿನ ಸಾಯಂಕಾಲ 8 ಗಂಟೆಯಿಂದ ಪ್ರವಚನ ಕಾರ್ಯಕ್ರಮ, ಡಿ. 30 ರಿಂದ ಜ. 2 ವರೆಗೆ ಗಂಗಸ್ಥಳದೊಂದಿಗೆ ನಿತ್ಯ ಪಲ್ಲಕ್ಕಿ ಉತ್ಸವ, ಜ 3 ಶನಿವಾರ ಬೆಳಿಗ್ಗೆ 6 ಗಂಟೆಗೆ ದೇವಿಯ ಮಹಾಭಿಷೇಕ, ಸಾಯಂಕಾಲ 6 ಗಂಟೆಗೆ ವೈಭವದ ರಥೋತ್ಸವ ಜರುಗಲಿದೆ. ಜ. 4 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರಿಗೆ ವಿಶೇಷ ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವದ ನಿಮಿತ್ಯ ಪ್ರವಚನ ಕಾರ್ಯಕ್ರಮ ಜರುಗಲಿದ್ದು ಹರಗುರು ಚರಮೂರ್ತಿಗಳು, ರಾಜಕೀಯ ಗಣ್ಯರು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬನಶಂಕರಿ ದೇವಿ ಜಾತ್ರಾ ಸಮಿತಿ ತಿಳಿಸಿದೆ.

Spread the love

Leave a Reply

Your email address will not be published. Required fields are marked *

You missed

error: Content is protected !!