Oplus_0

ಮಾಡಬೂಳ, ಗುಂಡಗುರ್ತಿ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಅಪಾರ ಆಯುಕ್ತ ರಾಹುಲ್ ಪಾಂಡ್ವೆ ಭೇಟಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಮಾಡಬೂಳ ಗ್ರಾಮದ ಕರ್ನಾಟಕ ಪಬ್ಲಿಕ ಶಾಲೆ ಹಾಗೂ ಗುಂಡಗುರ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗಳಿಗೆ ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪಾರ ಆಯುಕ್ತ ರಾಹುಲ್ ತುಕಾರಾಮ್ ಪಾಂಡ್ವೆ ಅವರು ಮಂಗಳವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ -2 ನ್ನು ಪರಿಶೀಲಿಸಿ ಪರೀಕ್ಷೆ 1 ರ ಫಲಿತಾಂಶ ಪರಿಶೀಲಿಸಿ ನೊಂದಣಿಯಾದ ಎಲ್ಲಾ ಮಕ್ಕಳು ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗಬೇಕು. ಫಲಿತಾಂಶ ಉತ್ತಮಪಡಿಸಲು ಈಗಾಗಲೇ ನೀಡಿದ ಮಿಶನ್ 40+ ನ್ನು ಸರಿಯಾಗಿ ಅನುಷ್ಠಾನ ಮಾಡಿ ಶಾಲೆಯ ಫಲಿತಾಂಶ ಶೇ.90 ರಷ್ಟು ಪಡೆಯಲು ಎಲ್ಲಾ ಶಿಕ್ಷಕರು ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.

ಸಚಿವ ಪ್ರಿಯಾಂಕ್ ಖರ್ಗೆ ರವರು ಸರ್ಕಾರಿ ಶಾಲೆಗಳಿಗೆ ವಯಕ್ತಿಕವಾಗಿ ಮುದ್ರಿಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ನೀಡಿದ್ದು ಅವುಗಳನ್ನು ಮಕ್ಕಳಿಗೆ ಪ್ರಾಕ್ಟೀಸ್ ಮಾಡಿಸಲು ಮತ್ತು ಯಾವ ವಿಷಯದಲ್ಲಿ ಫಲಿತಾಂಶ ಕೊರತೆ ಇದೆ ಆ ವಿಷಯಕ್ಕೆ ವಿಶೇಷ ತರಗತಿಗಳನ್ನು ನಡೆಯಿಸಿ ಫಲಿತಾಂಶ ಉತ್ತಮಪಡಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಸೇರಿದಂತೆ ಶಿಕ್ಷಕರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!