Oplus_131072

ಹಿಂದೂ ಸಮಾವೇಶದಲ್ಲಿ ಸೇವಾಲಾಲ್ ಮಹಾರಾಜರ ಭಾವಚಿತ್ರ ಹಾಕದೆ ಬಂಜಾರ ಸಮಾಜಕ್ಕೆ ಅವಮಾನಿಸಿರುವುದು ಖಂಡನೀಯ: ಜಗದೀಶ್ ಚವ್ಹಾಣ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಆಯೋಜನೆ ಸಮಿತಿ ವತಿಯಿಂದ ಕಳೆದ ದಿ. 7 ರಂದು ಹಮ್ಮಿಕೊಂಡಿದ್ದ ಹಿಂದೂ ಸಮಾವೇಶ ಎಂಬ ಕಾರ್ಯಕ್ರಮ ಮಾಡಿ ಆ ಕಾರ್ಯಕ್ರಮದಲ್ಲಿ ಎಲ್ಲಾ ಶರಣ ಸತ್ಪುರುಷರ ಭಾವಚಿತ್ರಗಳು ಹಾಕಿ ಬಂಜಾರ ಸಮಾಜದ ಆರಾಧ್ಯ ದೈವ ಸಂತ ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರ ಹಾಕದೆ ಬಂಜಾರ ಸಮಾಜಕ್ಕೆ ಅಪಮಾನಿಸಿರುವ ಸಮಿತಿಯ ಅಧ್ಯಕ್ಷರ, ಗೌರವಾಧ್ಯಕ್ಷರ ಹಾಗೂ ಇಡೀ ಸಮಿತಿಯ ನಡೆ ಖಂಡನೀಯ ಎಂದು ಬಂಜಾರ ಸಮಾಜದ ತಾಲೂಕು ಯುವ ಅಧ್ಯಕ್ಷ ಜಗದೀಶ್ ಚವ್ಹಾಣ ತಿಳಿಸಿದ್ದಾರೆ.

ಬಂಜಾರ ಸಮಾಜದ ನಾಯಕರು ಆಗಿರುವ ತುಕಾರಾಮ್ ನಾಯಕ್ ರಾಥೋಡ ಅವರಿಗೆ ಸಮಿತಿ ಗೌರವಾಧ್ಯಕ್ಷರನ್ನಾಗಿ ಮಾಡಿದಕ್ಕಾಗಿ ಸ್ವಾಗತಿಸುತ್ತೇನೆ, ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮದೇ ಸಮಾಜದ ಗುರುಗಳ ಅಪಮಾನವನ್ನು ಸಹಿಸಿಕೊಂಡು ಕಾರ್ಯಕ್ರಮವನ್ನು ಆಲಿಸಿದವರಿಗೆ ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಬಂಜಾರ ಸಮಾಜದ ಜನರಿಗೆ ಸಂಸ್ಕೃತಿಕವಾಗಿ ಮೆರವಣಿಗೆಯಲ್ಲಿ ಬಳಸಿಕೊಂಡು ಹಾಗೂ ಕುರ್ಚಿ ತುಂಬಲು ಬಳಸಿಕೊಳ್ಳಲಾಗಿದೆ. ಸಮಿತಿಯ ಗೌರವಾಧ್ಯಕ್ಷರು ಕಾರ್ಯಕ್ರಮದಲ್ಲಿ ಸೇವಾಲಾಲ್ ಮಹಾರಾಜ ಭಾವಚಿತ್ರ ಹಾಕಿಸಿ ಪೂಜಿಸಬೇಕಾಗಿತ್ತು, ಆ ಕಾರ್ಯಕ್ರಮದಲ್ಲಿ ಫೋಟೋ ಇಲ್ಲದ ಕಾರಣಕ್ಕಾಗಿ ಆ ಕಾರ್ಯಕ್ರಮ ಬಹಿಷ್ಕರಿಸಬೇಕಾಗಿತ್ತು ಆಗ ಇಡೀ ಸಮಾಜ ಗೌರವಿಸುತ್ತಿತ್ತು ಸಮಾಜಕ್ಕೆ ಆಗಿರೋ ಅಪಮಾನಕ್ಕಾಗಿ ಕ್ಷಮೆ ಕೇಳಬೇಕು ಕೇಳಲಿಲ್ಲದ ಪಕ್ಷದಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!