Oplus_0

ಮಠಪತಿ ಶಾಸ್ತ್ರೀ ಪರಿವಾರದ ಕಾರ್ಯಕ್ರಮ | ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಮುಖ್ಯ: ಗವಿಸಿದ್ದೇಶ್ವರ ಸ್ವಾಮೀಜಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಂದೆತಾಯಿಗಳು ಮಕ್ಕಳಿಗಾಗಿ ಸಂಪತ್ತು ಮಾಡುವುದಕ್ಕಿಂತ ಉತ್ತಮ ಸಂಸ್ಕಾರ ನೀಡುವುದು ಮುಖ್ಯ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಮಠಪತಿ ಶಾಸ್ತ್ರೀ ಪರಿವಾರದ ಶಾಲು ಮತ್ತು ಕಿರಗುಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗರ್ಭದಿಂದ ಅಂತಿಮ ಸಂಸ್ಕಾರದವರೆಗೆ ತಂದೆತಾಯಿಗಳು ಸಂಸ್ಕಾರ ನೀಡುವುದು ಬಹುಮುಖ್ಯವಾಗಿದೆ ಎಂದರು.

ಜೀವನದಲ್ಲಿ ಮೂರು ಸಂಗತಿಗಳು ಪ್ರಮುಖವಾಗಿವೆ ಹುಟ್ಟು, ಸಾವು ಮತ್ತು ಬದುಕು ಇಲ್ಲಿ ಹುಟ್ಟು, ಸಾವು ಯಾರ ಕೈಯಲ್ಲಿಲ್ಲ, ನಿಸರ್ಗ ದೇವ ತನ್ನ ಕೈಯಲ್ಲಿಟ್ಟುಕೊಂಡಿದ್ದಾನೆ, ಇದರ ಮಧ್ಯೆ ಬದುಕು ಮಾಡಬೇಕಿದೆ. ಜೀವನದ ಮೊದಲ ಹಾಗೂ ಕೊನೆಯ ಪುಟ ದೇವರು ಬರೆದಿಟ್ಟಿರುತ್ತಾನೆ ಮಧ್ಯೆದ ಪೇಜ್ ಗಳು ಖಾಲಿ ಬಿಟ್ಟಿರುತ್ತಾನೆ ಅವುಗಳು ನಾವು ತುಂಬಬೇಕಿದೆ ಎಂದು ಹೇಳಿದರು.

ಸೇಡಂ ಶಿವಶಂಕರ ಮಠದ ಶಿವಶಂಕರ ಶಿವಾಚಾರ್ಯರು, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಹಲಕರ್ಟಿ ಶ್ರೀ ಮುನೀಂದ್ರ ಶಿವಾಚಾರ್ಯರು, ಕುಕನೂರ ಶ್ರೀ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಕರಬಸಯ್ಯ ಶಾಸ್ತ್ರೀ ದಂಪತಿಗಳು, ಆನಂದ ಪಾಟೀಲ ನರಿಬೋಳ, ನಾಗರಾಜ ರೇಷ್ಮಿ, ನಾಗರಾಜ ಹೂಗಾರ, ಡಾ.ಮಹಾಂತಗೌಡ ಪಾಟೀಲ, ಬಸವರಾಜ ಪಾಟೀಲ ಭಾಗೋಡಿ, ವೀರಣ್ಣ ಸುಲ್ತಾನಪೂರ, ಪ್ರಸಾದ್ ಅವಂಟಿ, ಸಿದ್ದು ರೇಷ್ಮಿ, ಶಿವಶರಣಯ್ಯ ಪುರದಯ್ಯನಮಠ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!