Oplus_0

ಸುಗೂರ ಎನ್ ಗ್ರಾಮಕ್ಕೆ ಏ.11 ರಂದು ಸಿಎಂ ಸಿದ್ದರಾಮಯ್ಯ | ಶ್ರೀ ಭೋಜಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ತಹಸೀಲ್ದಾರ್ ಸ್ಥಳ ಪರಿಶೀಲನೆ

‌ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಸುಗೂರ. ಎನ್ ಗ್ರಾಮದ ಪವಾಡ ಪುರುಷ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ ಸ್ವಯಂ ಸಿದ್ಧ ಶರಣ ಶ್ರೀ ಭೋಜಲಿಂಗೇಶ್ವರ ದೇವಸ್ಥಾನದ ಕಟ್ಟಡ ಲೋಕಾರ್ಪಣೆ ಮತ್ತು ಕಲ್ಯಾಣ ಮಂಟಪ ಮತ್ತು ಬೆಳ್ಳಿ ರಥೋತ್ಸವ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ಏಪ್ರಿಲ್ 11 ರಂದು ಶ್ರೀಮಠಕ್ಕೆ ಆಗಮಿಸುತ್ತಿರುವ ಪ್ರಯುಕ್ತ, ಸಿದ್ಧತೆಗಳ ಕುರಿತು ತಹಸೀಲ್ದಾರ್ ನಾಗಯ್ಯ ಹಿರೇಮಠ ಗುರುವಾರ ಶ್ರೀ ಭೋಜಲಿಂಗೇಶ್ವರ ಮಠದ ಪೀಠಾದಿಪತಿ ಹಿರಗಪ್ಪ ತಾತನವರ ಜೊತೆಗೆ ಸ್ಥಳ ಪರಿಶೀಲನೆ ನಡೆಸಿದರು.

ಬರುವ ಏಪ್ರಿಲ್ 11 ರಂದು ಸಿಎಂ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಶ್ರೀಮಠದ ಆವರಣದಲ್ಲಿ ಭದ್ರತೆ, ವಾಹನ ನಿಲುಗಡೆ ಮತ್ತು ಕಾರ್ಯಕ್ರಮದ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಮತ್ತು ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಹಸೀಲ್ದಾರರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ವೇದಿಕೆ ಸಿದ್ಧತೆ, ಅನೇಕ ರಾಜಕೀಯ ಗಣ್ಯರು ಮತ್ತು ಈ ನಾಡಿನ ಅನೇಕ ಮಠಾಧೀಶರು ಆಗಮನದ ದಾರಿ ಮತ್ತು ಮಠದ ಆಡಳಿತ ಮಂಡಳಿಯೊಂದಿಗೆ ಸಮನ್ವಯದ ಕುರಿತು ಸಮಾಲೋಚನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿ ಹಜರತ್, ಗ್ರಾಮ ಲೆಕ್ಕಾದಿಕಾರಿ ಮತ್ತು ರಾಮಲಿಂಗಯ್ಯ ಸ್ವಾಮಿ. ಮಹೇಶ್ ಪಾಟೀಲ ಸುಗೂರ ಎನ್, ಶರಣಗೌಡ ಬೆನಕನಹಳ್ಳಿ, ಭೀಮರೆಡ್ಡಿ ಗೌಡ ಕುರಾಳ, ವಿಶ್ವನಾಥ ರೆಡ್ಡಿ ಪಾಟೀಲ ಸುಗೂರ ಎನ್, ಸಂಗಾರೆಡ್ಡಿಗೌಡ ಮಾಲಿ ಪಾಟೀಲ , ಶರಣಗೌಡ ವಕೀಲರು, ಈರಣ್ಣ ಬಲಕಲ್ ಎಲ್ ಐ.ಸಿ. ಮಹಿಪಾಲ್ ರೆಡ್ಡಿ ಕರಣಗಿ, ಸಿದ್ರಾಮರೆಡ್ಡಿಗೌಡ ಬೆನಕನಹಳ್ಳಿ, ಮಲ್ಲಿಕಾರ್ಜುನ ಕಾರ್ಪೆಟರ್ ಯಾದಗಿರ, ಸುರೇಶ್ ಕೊಟಿಮನಿ ಯಾದಗಿರ, ಮಲ್ಲಪ್ಪ ಅರಿಕೇರಿ ಮಾಸ್ತರ, ಶಂಕರಗೌಡ ಮಾಸ್ತರ ಲಿಂಗಸುಗೂರ, ಡಾ.ಸುರೇಶ್ ಮಾಘನೂರ, ಮಹಾದೇವಪ್ಪ ಸಾಹುಕಾರ್ ಕುರಕುಂದಿ, ಬಸ್ಸುಗೌಡ ಮಾಲಿ ಪಾಟೀಲ್, ಸಿದ್ದುಗೌಡ ಕುರಾಳ, ಬಾಬು ಪಾಟೀಲ, ಬಸವರಾಜ ಹಡಪದ ಸುಗೂರ ಎನ್, ರಾಜೇಂದ್ರ ನಾಯ್ಕೊಡಿ, ಪ್ರಭು ಹೂಗಾರ, ಸಿದ್ದು ಸಾಹುಕಾರ್ ಕುಂಬಾರ. ಯಮನಪ್ಪ ತಳವಾರ, ಸಾಬ್ಬಣ್ಣ ಬೇನಿಗಿಡ, ಸೋಮು ಮಂಡ್ನಾಳ ಸೇರಿದಂತೆ ಸುಗೂರ ಎನ್, ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!