ವಾಡಿಯಲ್ಲಿ ಕಣಕಿ ಬಣಮಿಗೆ ಬೆಂಕಿ: ರೈತ ಕಂಗಾಲು
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ನ್ಯೂಟೌನ್ ರಸ್ತೆ ಯಲ್ಲಿರುವ ಸತೀಶ್ ನಾಯಕ ಅವರ ಹೊಲದಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಜೋಳದ ಕಣಿಕಿ ಬಣವೆ ಭಸ್ಮವಾಗಿದೆ.
ಸುಮಾರು 50ಸಾವಿರ ಮೌಲ್ಯದ ಕಣಿಕಿ ಬಣವೆ ಸಂಗ್ರಹವಾಗಿತ್ತು. ಮಧ್ಯಾಹ್ನ ಬಿರಿ ಬೀಸಿಲಿಗೆ ಜೊತೆಗೆ ಗಾಳಿಗೆ ಬೆಂಕಿ ಹೊತ್ತಿಕೊಂಡಿತು.
ಈ ಅವಘಡದಿಂದ ಬಡ ರೈತನಿಗೆ ನಷ್ಟವಾಗಿದೆ, ಆದಾನಿ ಕಂಪನಿಯ ಎಚ್ ಆರ್ ಮುಖ್ಯಸ್ಥ ಕೊಟೇಶ್ವರ ಅವರ ಸಹಾಯದಿಂದ ಬೆಂಕಿ ನಂದಿಸುವ ವಾಹನ ಸಮಯದಲ್ಲಿ ಆಗಮಿಸಿದರ ಪರಿಣಾಮ ಇನ್ನೂ ಹೆಚ್ಚಿನ ಪ್ರಮಾಣದಲ್ಲಿನ ಅವಘಡ ಆಗಲಿಲ್ಲ ಎಂದು ಯುವ ಮುಖಂಡ ವಿಠಲ ನಾಯಕ, ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ತಿಳಿಸಿದರು.
ಕೃಷಿ ಇಲಾಖೆಯ ಅಧಿಕಕಾರಿಗಳು ರೈತರಿಗೆ ಮುಂಜಾಗ್ರತೆಯ ಕ್ರಮಗಳನ್ನು ಮತ್ತು ಅಗ್ನಿ ಶಾಮಕ ವಾಹನಗಳ ತಕ್ಷಣ ಘಟನಾ ಸ್ಥಳಕ್ಕೆ ಬರುವ ಹಾಗೆ ಜವಾಬ್ದಾರಿ ಹೊಂದಬೇಕು. ಇಂತಹ ಬಡ ರೈತರಿ ಪರಿಹಾರ ಕೊಡಿಸುವ ಕೆಲಸವಾಗಲಿ ಬರಿ ಬಾಯಿ ಮಾತಿನಲ್ಲಿ ರೈತರ ಪರ ಸರ್ಕಾರ ಅನ್ನದೆ, ರೈತರ ಸಂಕಷ್ಟಕ್ಕೆ ಸ್ಪಂದಿಸುವಂತಾಗಲಿ ಎಂದರು.
ಈ ಸಂಧರ್ಭದಲ್ಲಿ ನಷ್ಟಕ್ಕೊಳಗಾದ ರೈತ ಸತೀಶ್ ನಾಯಕ, ಕಮಲ ಚವ್ಹಾಣ, ಸಂದೀಪ ನಾಯಕ ಸೇರಿದಂತೆ ಇತರರು ಇದ್ದರು.
