ಶಹಾಬಾದ ಶಿಕ್ಷಕರ ಸಂಘದ ಚುನಾವಣೆ, 2ನೇ ಬಾರಿ ಅಧ್ಯಕ್ಷರಾಗಿ ಕರಣಿಕ ಅವಿರೋಧ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆಯ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗೇಂದ್ರ ಬೇಲೂರ ಅವರು ತಿಳಿಸಿದ್ದಾರೆ.
ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ 2ನೇ ಅವಧಿಗೆ ಶಿವಪುತ್ರ ಕರಣಿಕ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಲಲಿತಾಬಾಯಿ, ಉಪಾಧ್ಯಕ್ಷರಾಗಿ ರಜೀಯಾ ಬೇಗಂ, ಖಜಾಂಚಿಯಾಗಿ ರವಿಕುಮಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಹಾಜಪ್ಪ ಬಿಳಾರ, ಟಿಆರ್’ಒ ಗಿರಿಮಲ್ಲಪ್ಪ ವಳಸಂಗ, ಎಟಿಆರಒ ಧಾನಯ್ಯ ಮಠ ಹಾಗೂ ಮತಗಟ್ಟೆ ಏಜೆಂಟರಾದ ಶಿವಲಿಂಗಪ್ಪ ಹೆಬ್ಬಾಳಕರ ಮತ್ತು ಸುಭಾಷ ಸಾಕ್ರೆ, ಹರೀಶ್ ಕರಣಿಕ ಅವರು ಉಪಸ್ಥಿತರಿದ್ದರು.
ವರದಿ: ನಾಗರಾಜ ದಂಡಾವತಿ.

