ಅಶೋಕ ಲೈಲ್ಯಾಂಡ್ ಮತ್ತು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಸಹಯೋಗದಲ್ಲಿ ಸರಕಾರಿ ಶಾಲೆಗಳಿಗೆ ಕ್ರೀಡಾಭಿವೃದ್ದಿ ಕಾರ್ಯಕ್ರಮ ಜಾರಿ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಅಶೋಕ ಲೈಲ್ಯಾಂಡ್, ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಜಿಲ್ಲೆ ಇವರ ಸಹಯೋಗದಲ್ಲಿ ಚಿತ್ತಾಪುರ ತಾಲೂಕಿನ ಎಲ್ಲಾ 242 ಶಾಲೆಗಳಲ್ಲಿ ರೋಡ್ ಟು ಸ್ಕೂಲ್ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ ಎಂದು ಎಲ್ ಎಲ್ ಎಫ್ ಸಂಸ್ಥೆಯ ಮುಖ್ಯ ಕ್ರೀಡಾ ತರಬೇತಿದಾರ ಕ್ರಿಸ್ಟೋಪರ್ ಹೇಳಿದರು.
ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಡಿಯಲ್ಲಿ ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿನ ಮಕ್ಕಳು ಉತ್ತಮವಾಗಿ ಕಲಿಯಬೇಕು ಮತ್ತು ಸದೃಡವಾಗಿ ಬೆಳೆಯಬೇಕು ಇದನ್ನು ಇಡೇರಿಸಲು ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸುವುದರ ಮೂಲಕ ಸರಕಾರಿ ಶಾಲೆಯಲ್ಲಿ ಮಕ್ಕಳ ಬುನಾದಿ ಹಂತದ ಸಾಕ್ಷರತೆ ಮತ್ತು ಗಣಿತದ ಮೂಲಭೂತ ಕ್ಷಮತೆಗಳನ್ನು ಅಭಿವೃದ್ದಿ ಪಡೆಸಲು ಪ್ರಯತ್ನಿಸುತ್ತಿದೆ. ತಾಲೂಕಿನ 30 ಸಾವಿರ ಮಕ್ಕಳು ಮತ್ತು 60 ಸಾವಿರ ಪೋಷಕರನ್ನು ಈ ಕಾರ್ಯಕ್ರಮದಡಿಯಲ್ಲಿ ತಲುಪಲು ಉದ್ದೇಶಿಸಿಸಲಾಗಿದೆ.
ಕ್ರೀಡಾಭಿವೃದ್ದಿ ಕಾರ್ಯಕ್ರಮ ಅನುಷ್ಠಾನದಡಿಯಲ್ಲಿ ತಾಲೂಕಿನ ಎಲ್ ಎಲ್ ಎಫ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು, ಕ್ರೀಡಾ ಸುಗಮಕಾರರು, ಹಿರಿಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಪ್ರೊಜೆಕ್ಟ್ ಅಸೋಸಿಯೇಟ್ಸ್ ಸೇರಿ ಒಟ್ಟು 292 ಜನರಿಗೆ ಸೆಪ್ಟೆಂಬರ್ 26 ರಿಂದ 28 ರವರೆಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಈ ತರಬೇತಿ ಜಿಲ್ಲಾ ಕ್ರೀಡಾಂಗಣ ಬಳಸಲು ಅನುಮತಿ ನೀಡಿ ತಂಡಕ್ಕೆ ಕ್ರೀಡೆಗಳ ಮಹತ್ವದದ ಬಗ್ಗೆ ಮಾತನಾಡುತ್ತ ಅಶೋಕ ಲೈಲ್ಯಾಂಡ ಮತ್ತು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಚಿತ್ತಾಪುರ ತಾಲೂಕಿನ ಶಾಲೆಗಳ ಅಭಿವೃದ್ದಿಗೆ ನೀಡುತ್ತಿರುವ ಕೊಡುಗೆಯನ್ನು ಹೊಗಳುತ್ತ ಮುಂದಿನ ದಿನಗಳಲ್ಲಿ ಕ್ರೀಡಾಭಿವೃದ್ದಿಗೆ ಇಲಾಖೆಯು ಸಹಕಾರ ನೀಡಲಿದೆ, ಗ್ರಾಮೀಣ ಪ್ರದೇಶದಲ್ಲಿನ ಬಡ ಮಕ್ಕಳಿಗೆ 4ನೇ ಮತ್ತು 7ನೇ ತರಗತಿಗಳಿಗೆ ಉಚಿತವಾಗಿ ಕ್ರೀಡಾ ಶಾಲೆಗೆ ಪ್ರವೇಶ ನೀಡಲಾಗುವುದು ಎಂದರು.
ಜಿಲ್ಲಾ ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಸುರೇಶ್ ತರಬೇತಿಗಳಿಗೆ ಚಾಲನೆ ನೀಡಿದರು. ಸಂಜಯ ಬಾಣಸ ಹಿರಿಯ ಹಾಕಿ ತರಬೇತಿದಾರರು ಜಿಲ್ಲಾ ಕ್ರೀಡಾ ಇಲಾಖೆ ಮತ್ತು ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ. ಎಲ್ ಎಲ್ ಎಫ್ ಸಂಸ್ಥೆಯ ಸಿಬ್ಬಂದಿಗಳಾದ ತಿರುಪತಿ ಮನ್ನಾಪೂರ, ಗುರು, ರೋಹಿತ ಮತ್ತು ಶೃತಿ ತರಬೇತಿಯ ನೇತೃತ್ವ ವಹಿಸಿದ್ದರು.