ಕನ್ನೇರಿ ಶ್ರೀಗಳ ಬಸವಾದಿ ಶಿವಶರಣರ ಬೃಹತ್ ಸಮಾವೇಶಕ್ಕೆ ಹಡಪದ ಅಪ್ಪಣ್ಣ ಸಮಾಜದ ಬೆಂಬಲ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಮಹಾರಾಷ್ಟ್ರದ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಕಲಬುರಗಿಯ ನೂತನ ವಿದ್ಯಾಲಯ ಮೈದಾನ (ಎಸ್.ವಿ)ದಲ್ಲಿ ಸಂಜೆ 4 ಗಂಟೆಗೆ ನಡೆಯುವ ಬಸವಾದಿ ಶಿವಶರಣರ ಬೃಹತ್ ಸಮಾವೇಶಕ್ಕೆ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾಯಕ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷ ಭೀಮಣ್ಣ ಬೋನಾಳ ಅವರು ಪತ್ರಿಕೆಯಲ್ಲಿ ಸಣ್ಣ ಸಮುದಾಯಗಳ ಹೆಸರಿನೊಂದಿಗೆ ಹಡಪದ ಅಪ್ಪಣ್ಣ ಸಮಾಜದ ಹೆಸರನ್ನೂ ಉಲ್ಲೇಖಿಸಿ ಕನ್ನೇರಿ ಶ್ರೀಗಳ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಮುಖಂಡರು ತಿಳಿಸಿದ್ದಾರೆ.

ಹಡಪದ ಅಪ್ಪಣ್ಣ ಸಮಾಜದ ಒಪ್ಪಿಗೆ ಅಥವಾ ನಿರ್ಣಯವಿಲ್ಲದೆ ಸಮಾಜದ ಹೆಸರನ್ನು ಯಾವುದೇ ವಿಚಾರದಲ್ಲಿ ಬಳಸುವುದು ಸೂಕ್ತವಲ್ಲ. ವೈಯಕ್ತಿಕ ಸ್ವಾರ್ಥ, ರಾಜಕೀಯ ಉದ್ದೇಶ ಅಥವಾ ಪ್ರಚಾರಕ್ಕಾಗಿ ಸಮಾಜದ ಹೆಸರನ್ನು ಬಳಸಿಕೊಳ್ಳಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಸವಾದಿ ಶಿವಶರಣರ ತತ್ವ, ವಚನ ಸಾಹಿತ್ಯ, ಕಾಯಕ-ದಾಸೋಹದ ಸಂದೇಶ ಹಾಗೂ ಸಮಾನತೆಯ ವಿಚಾರಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಹಡಪದ ಅಪ್ಪಣ್ಣ ಸಮಾಜದ ಬೆಂಬಲವಿದೆ ಎಂದು ಜಿಲ್ಲಾ ಘಟಕದ ಪದಾಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಕಾಯಕ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಹೆಸರನ್ನು ಬಳಸಿರುವ ಕುರಿತು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಮ್ಮ ಸಮಾಜದ ನಿಲುವನ್ನು ಕೇಳದೆ ಸಮಾಜದ ಹೆಸರನ್ನು ಬಳಸುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಸಿ. ಹಡಪದ ಹಳ್ಳಿ ಶಹಾಬಾದ, ಕಲಬುರಗಿ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್., ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಹಡಪದ ಶಿಕ್ಷಕರು ಕಿರಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್, ಆನಂದ್ ಖೇಳಗಿ, ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ, ಕಲಬುರಗಿ ತಾಲೂಕು ಅಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ, ವಿನೋದ ಅಂಬಲಗಾ. ಮತ್ತು ಸುನೀಲ್ ಕುಮಾರ್ ಭಾಗ ಹಿಪ್ಪರರ್ಗಾ. ಸೇರಿದಂತೆ ಶಿವಶರಣರ ಹಡಪದ ಯಳವಂತಗಿ, ಮಲ್ಲಿಕಾರ್ಜುನ ಬೆಳಗುಂಪಿ, ಗುಂಡು ಹಡಪದ, ಶಂಕರ ಹರವಾಳ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!