Oplus_131072

ಬೆಳಗುಂಪಾ ಶ್ರೀಧರ್ ನವಲಕರ್ ಸಾವಿಗೂ ಬೇರೆಯವರಿಗೂ ಯಾವುದೇ ಸಂಭಂದವಿಲ್ಲ, ಇಲ್ಲಿ ಯಾರೂ ರಾಜಕೀಯ ಮಾಡಬೇಡಿ: ಚೆನ್ನಮ್ಮ ಅಮೃತ್ ನವಲಕರ್ 

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಚಿತ್ತಾಪುರ ತಾಲೂಕಿನ ಬೆಳಗುಂಪಾ ಗ್ರಾಮದ ಶ್ರೀಧರ್ ನವಲಕರ್ ಕುರಿ ಮೇಯಿಸಲು ಹೋಗಿ ಈಚೇಗೆ ಮರಳು ಹೊಂಡದಲ್ಲಿ ಕಾಲುಜಾರಿ ಬಿದ್ದು ಆಕಸ್ಮಿಕ ಸಾವನ್ನಪ್ಪಿದ್ದು ಇತನು ನನ್ನ ಮಗನಾಗಿದ್ದು ಸಾವನಪ್ಪುವ ಎರಡು ದಿನಗಳ ಮುನ್ನ ಮನೆಯಲ್ಲಿ ಕುಡಿದು ಗಲಾಟೆ ಮಾಡಿರುತ್ತಾನೆ ಹೀಗಾಗಿ ಇದಕ್ಕೂ ಬೇರೆಯವರಿಗೂ ಯಾವುದೇ ಸಂಭಂದವಿಲ್ಲ ಎಂದು ಮೃತನ ತಾಯಿ ಚೆನ್ನಮ್ಮ ಅಮೃತ್ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾನವೀಯತೆ ಆಧಾರದ ಮೇರೆಗೆ ನಮ್ಮ ತಾಲೂಕಿನ ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ಯಾಗಾಪುರ ಅವರು ನಮ್ಮ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಗುರುವಾರ ನಮ್ಮ ಸಮಾಜದವರಾದ ರಾಜ್ಯ ಕೋಲಿ ಗಂಗಮತಸ್ಥ ಸಮಾಜದ ಗೌರವಾಧ್ಯಕ್ಷರು ಮತ್ತು ಎಂಎಲ್ಸಿ  ತಿಪ್ಪಣ್ಣಪ್ಪ ಕಮಕನೂರ ರವರು ಬಂದು ಸಾಂತ್ವನ ಹೇಳಿ ವೈಯಕ್ತಿಕವಾಗಿ 1 ಲಕ್ಷ ರೂ. ನಗದು ಸಹಾಯ ಮಾಡಿರುತ್ತಾರೆ ಮತ್ತು ನಮ್ಮ ಮನೆಯಲ್ಲಿ ನನ್ನ ಸೊಸೆಗೆ ಸರಕಾರಿ ನೌಕರಿ ಕೊಡಿಸುವ ಭರವಸೆ ನೀಡಿರುತ್ತಾರೆ ಎಂದು ಹೇಳಿದರು.

ಈ ವಿಷಯದಲ್ಲಿ ಬೇರೆ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಾಗಲಿ, ಪರಸ್ಪರ ಕೆಸರೆರಚಾಟ  ದಯವಿಟ್ಟು ಮಾಡಬೇಡಿ, ನಮ್ಮ ಕುಟುಂಬದ ಸಾವನ್ನು ಕೆಲವು ಜನ ವೈಯಕ್ತಿಕ ಲಾಭಕ್ಕಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದು ಹಾಗಾಗಬಾರದೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಗೀತಾ ಶ್ರೀಧರ್ ನವಲಕರ್, ಕಿಶೋರ್ ನವಲಕರ್ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!