ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರರ ವೈಭವದ ರಜತ್ ಮಹೋತ್ಸವ, 78 ಕೆ.ಜಿ ಬೆಳ್ಳಿಯಲ್ಲಿ ಶ್ರೀಗಳ ತುಲಾಭಾರ, ವಿಶ್ವಕ್ಕೆ ಭಾರತ ಆಧ್ಯಾತ್ಮದ ತವರು: ಸುತ್ತೂರ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಸ್ಥಾನವಿದೆ. ವಿಶ್ವದ ಇತರೆ ದೇಶಗಳಿಗಿಂತ ಭಾರತವು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ, ವಿಶ್ವಕ್ಕೆ ಭಾರತ ಆಧ್ಯಾತ್ಮದ ತವಾರಾಗಿದೆ ಎಂದು ಸುತ್ತೂರ ಮಠದ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ತಾಲೂಕಿನ ಭರತನೂರಿನ ವಿರಕ್ತ ಮಠದಲ್ಲಿ ಹಮ್ಮಿಕೊಂಡ ರಜತ್ ಮಹೋತ್ಸವ ತುಲಾಭಾರ ಹಾಗೂ ಭರತನೂರಿನ ಬೆಳಕು ಅಭಿನಂಧನಾ ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿಯನ್ನು ವಚನ ಸಾಹಿತ್ಯ ಹೊಂದಿದೆ. ಬಸವಣ್ಣನವರು 12 ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯ ಮೂಲಕ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದು ಹೇಳಿದರು.
ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಹುಲಸೂರ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ಮುಗಳನಾಗಾಂವಿಯ ಪೂಜ್ಯ ಅಭಿನವ ಸಿದ್ದಲಿಂಗ ಶಿವಾಚಾರ್ಯ, ಚಿಣಮಗೇರಾದ ಪೂಜ್ಯ ವೀರಮಹಾಂತ ಶಿವಾಚಾರ್ಯರು, ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಶಾಸಕ ಡಾ. ಅವಿನಾಶ ಜಾಧವ್, ಕಸಾಪ ಜಿಲ್ಲಾಧ್ಯಕ್ಷ ವಿಜಯುಮಾರ ತೇಗಲತಿಪ್ಪಿ ಮಾತನಾಡಿದರು.
ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳವರ ನಿರಂಜನ ಚರ ಪಟ್ಟಧಿಕಾರದ 25 ನೇ ರಜತ್ ಮಹೋತ್ಸವದ ನಿಮಿತ್ತ ಭಕ್ತರಿಂದ ಸಂಗ್ರಹವಾದ 78 ಕೆ.ಜಿ ಬೆಳ್ಳಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಚಿಕ್ಕಗುರನಂಜೇಶ್ವರ ಶ್ರೀಗಳಿಗೆ ಬೆಳ್ಳಿ ಕಿರೀಟ ತೊಡಿಸಿ ತುಲಾಭಾರ ಮಾಡಲಾಯಿತು.
ಸಾಹಿತಿ ಲೇಖಕರಾದ ಡಾ. ವಿಜಯಕುಮಾರ ಪರೂತೆ, ಹಾಗೂ ರೇವಣಸಿದ್ದಪ್ಪ ದುಖಾನ ಸಂಪಾದಕತ್ವದಲ್ಲಿ ಹೊರತಂದ ಭರತನೂರಿನ ಬೆಳಕು ಅಭಿನಂದನಾ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು.
ಬನಹಟ್ಟಿ ಮಾಲ್ದಿ ರುಚಿಗೆ ಮನಸೋತ ಭಕ್ತರು: ಕಾಜು, ಕಿಸ್ ಮಿಸ್, ಬಾದಾಮ, ಏಲಕ್ಕಿ, ಜಾಜಿಕಾಯಿ, ಕೊಬ್ಬರಿ, ತುಪ್ಪ ಒಟ್ಟು 7 ಲಕ್ಷ ರೂ. ಗಳಲ್ಲಿ 25 ಕ್ವಿಂಟಲ್ ಭಕ್ತರಿಗಾಗಿ ಸಿದ್ಧಗೊಳಿಸಿರುವ ಮಾಲ್ದಿ ರುಚಿಗೆ ಮನಸೋತ ಭಕ್ತರು ಮಾಲ್ದಿ ಸವಿದು ಸಂತೋಷಪಟ್ಟರು.
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಲಿಂಗರೆಡ್ಡಿ ದೇಶಮುಖ, ಮಾಜಿ ಜಿ.ಪಂ ಸದಸ್ಯ ಶಂಭುಲಿಂಗ ಗುಂಡಗುರ್ತಿ, ಸುಧಾಕಾರ ಪಾಟೀಲ್ ರಾಜಾಪೂರ, ಜಗಧೀಶ ಪಾಟೀಲ್ ರಾಜಾಪೂರ, ಸಂತೋಷ ಪಾಟೀಲ್ ಮಂಗಲಗಿ, ಪ್ರಶಾಂತ ಕದಮ, ಬಸವರಾಜ ಸಜ್ಜನಶೆಟ್ಟಿ, ಸತ್ಯನಾರಯಣ ಕುಲಕರ್ಣಿ ಭರತನೂರ, ಮುರಗಯ್ಯ ಸ್ವಾಮಿ ಮಠಪತಿ, ಕೊಕಟನೂರ, ಶಿರಹಟ್ಟಿ, ಸುಟಟ್ಟಿ, ಬಳವಾಡ, ಜಂಬಗಿ(ಕೆ.ಡಿ), ಕಡಕೋಳ್, ಶೂರ್ಪಾಲಿ, ಬನಹಟ್ಟಿ, ಕೆ.ಡಿ. ಬುದ್ದಿ, ಮಾಚಕನೂರ, ಮಂಟೂರ, ಮುಧೋಳ, ಜಮಖಂಡಿ ಅಮರ ಗೋಳ, ಧಾರವಾಡ, ಸವದತ್ತಿ, ಸೇರದಂತೆ ಕಾಳಗಿ ತಾಲೂಕಿನ ಸುತ್ತಲಿನ ಗ್ರಾಮದ ಸಾವಿರಾರು ಭಕ್ತರು ಇದ್ದರು. ರೇವಣಸಿದ್ದಪ್ಪ ದುಖಾನ ನಿರೂಪಿಸಿ ವಂದಿಸಿದರು.