ಚಿತ್ತಾಪುರ ಚಾಲಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಚಾಲಕರ ಒಕ್ಕೂಟದಿಂದ ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗೆ ಮನವಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಚಾಲಕರ ಸಮಸ್ಯೆಗಳನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಬಗೆಹರಿಸಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂಟ ತಾಲೂಕು ಅಧ್ಯಕ್ಷ ಜಗನ್ನಾಥ ಕಾಶಿ ನೇತೃತ್ವದಲ್ಲಿ ಚಾಲಕರು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಹಾಗೂ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದಲ್ಲಿ ಚಾಲಕರಿಗೆ ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗ ಇರುವುದಿಲ್ಲ ಇದರಿಂದ ತುಂಬಾ ತೊಂದರೆಯಾಗುತ್ತಿದೆ ಆದ್ದರಿಂದ ವಾಹನಗಳಿಗೆ ನಿಲ್ಲಿಸಲು ಸ್ಥಳಾವಕಾಶ (ಟ್ಯಾಕ್ಸಿ ಸ್ಟ್ಯಾಂಡ್) ನಿರ್ಮಾಣ ಮಾಡಬೇಕು ಹಾಗೂ ಚಾಲಕರ ವಿಶ್ರಾಂತಿ ಮತ್ತು ಸಭೆ ಸಮಾರಂಭಕ್ಕೆ ಅನುಕೂಲ ಆಗುವಂತೆ ಚಾಲಕರ ಭವನ ಮಂಜೂರು ಮಾಡುವ ಸರಕಾರಿ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಚಾಲಕರ ಒಕ್ಕೂಟ ತಾಲೂಕು ಪ್ರಧಾನ ಕಾರ್ಯದರ್ಶಿ ರವಿಚಂದ್ರ ದೊಡ್ಡಮನಿ, ಚಾಲಕರಾದ ತಿಪ್ಪಣ್ಣ  ಇವಣಿ, ಸಿದ್ದರಾಮ್, ಅಯ್ಯೂಬ್, ಲಕ್ಷ್ಮಿಕಾಂತ್, ಸೋಮಣ್ಣ, ಸುರೇಶ್, ಉಮೇಶ್, ನಾಗಣ್ಣ ಸಿದ್ದು ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!