Oplus_131072

ಪ್ರಧಾನ ಮಂತ್ರಿ ಅವಾಸ್ ಯೋಜನೆ 2.0, ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ಅರ್ಜಿ ಆಹ್ವಾನ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ರಹಿತ (ಕಚ್ಚಾ ಮನೆ ಹೊಂದಿರುವ ಮತ್ತು ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರವು unified web portal ನಲ್ಲಿ ಅರ್ಜಿ ಆಹ್ವಾನಿಸಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ.

ಪುರಸಭೆ ಕಾರ್ಯಾಲಯ ಚಿತ್ತಾಪುರ ವ್ಯಾಪ್ತಿಯೊಳಗೆ ಬರುವ ಎಲ್ಲಾ ವಾರ್ಡಗಳಲ್ಲಿ ಎಲ್ಲಾ ವಸತಿ ರಹಿತ (ಕಚ್ಚಾ ಮನೆ ಹೊಂದಿರುವ) ಮತ್ತು ನಿವೇಶನ https//pmaymurban.gov.in ದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನ ಜುಲೈ 15, ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯ ವಸತಿ ವಿಭಾಗದ ಶಾಖೆಯನ್ನು ಸಂಪರ್ಕಸಿ ಎಂದು ತಿಳಿಸಿದ್ದಾರೆ.

ಅರ್ಜಿದಾರರು ಹೊಂದಿರಬೇಕಾದ ದಾಖಲೆಗಳು:

ಆಧಾರ್ ಕಾರ್ಡ ( ಮನೆಯ ಯಜಮಾನ/ನಿ ಹಾಗೂ ತಂದೆ /ತಾಯಿಯ ಮತ್ತು ಪಡಿತರ ಚೀಟಿಯಲ್ಲಿರುವಂತೆ ಕುಟುಂಬ ಸದಸ್ಯರ ಆಧಾರ ಕಾರ್ಡಗಳು, ವಸತಿ ರಹಿತರಾದಲ್ಲಿ ನವೇಶನಕ್ಕೆ ಸಂಭಂದಿಸಿದ ದಾಖಲೆಗಳು ಹಕ್ಕು ಪತ್ರಗಳು /ಧಾನ ಪತ್ರ/ಕ್ರಯ ಪತ್ರ /ಉಡುಗೋರೆ ಪತ್ರ/ಖಾತಾ ನಕಲು ಫಾರಂ -3, ಪಡಿತರ ಚೀಟಿ, ಜಾತಿ-ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ,  ನಿಗದಿತ ನಮೂನೆ, ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ (ಲಭ್ಯವಿದ್ದಲ್ಲಿ ಮಾತ್ರ).

Spread the love

Leave a Reply

Your email address will not be published. Required fields are marked *

error: Content is protected !!