ಚಿತ್ತಾಪುರ ಏ.15 ರಂದು ಜಗಜ್ಯೋತಿ ಬಸವೇಶ್ವರ ರವರ 892ನೇ ಜನ್ಮದಿನೋತ್ಸವ ಅಂಗವಾಗಿ ಬಸವ ವಚನೋತ್ಸವ ಹಾಗೂ ಆದರ್ಶ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ: ಬಿರಾದಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ಚಿತ್ತಾಪುರ ತಾಲೂಕು ಘಟಕದ ವತಿಯಿಂದ ಏ.15 ರಂದು ಬೆಳಗ್ಗೆ 10.29 ಕ್ಕೆ ವಿಶ್ವಗುರು, ಜಗಜ್ಯೋತಿ ಬಸವೇಶ್ವರ ರವರ 892ನೇ ಜನ್ಮದಿನೋತ್ಸವ ಅಂಗವಾಗಿ ಬಸವ ವಚನೋತ್ಸವ ಹಾಗೂ ಆದರ್ಶ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷೆ ಜಯಶೀಲಾ ಬಿರಾದಾರ ಹೇಳಿದರು.
ಪಟ್ಟಣದ ಬ್ರಹ್ಮಕುಮಾರೀಸ್ ಸ್ಮೃತಿ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರವರೆಗಿನ ಶಿಕ್ಷಕ ಉಪನ್ಯಾಸಕರನ್ನು ಒಳಗೊಂಡ ಸಂಘಟನೆಯಾಗಿದ್ದು, ಶಿಕ್ಷಣ, ಶಿಸ್ತು, ಸಂಘಟನೆ, ಸೇವೆ ಮತ್ತು ಸನ್ಮಾನ ಈ ಧ್ಯೇಯಗಳನ್ನು ಹೊಂದಿದೆ. ಸಂಘದ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಕಳೆದ ವರ್ಷದಿಂದ ಅನೇಕ ವಿಭಿನ್ನ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅಂದಿನ ಕಾರ್ಯಕ್ರಮದಲ್ಲಿ ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರ ಸ್ವಾಮಿಗಳು, ಪ್ರಜಾಪಿತ ಬೃಹ್ಮಕುಮಾರಿ ಈಶ್ವರ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ ಗಿರಿಜಾ ಅಕ್ಕ ಇವರ ದಿವ್ಯ ಸಾನಿದ್ಯದಲ್ಲಿ ವಿಶೇಷ ಆಹ್ವಾನಿತರಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಸೂರ್ಯಕಾಂತ ಮದಾನೆ, ತಾಲೂಕು ಅಧ್ಯಕ್ಷೆ ಜಯಶೀಲಾ ಬಿರಾದಾರ ಅಧ್ಯಕ್ಷತೆ ವಹಿಸುವರು, ಉದ್ಘಾಟಕರಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಶ್ರೀ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಿ. ಚಿಂಚನಸೂರ ಅವರು ಆಗಮಿಸಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಸಿಪಿಐ ಚಂದ್ರಶೇಖರ ತಿಗಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳುಂಡಗಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ, ಬಿ.ಆರ್.ಸಿ ಮಲ್ಲಿಕಾರ್ಜುನ ಸೇಡಂ ಇವರ ಘನ ಉಪಸ್ಥಿತಿಯಲ್ಲಿ ವಿಶೇಷ ಉಪನ್ಯಾಸಕರಾಗಿ ಕಲಬುರಗಿ ನಿವೃತ್ತ ಉಪನ್ಯಾಸಕ ಮಲ್ಲಿಕಾರ್ಜುನ ಪಾಟೀಲ, ಮುಖ್ಯ ಅತಿಥಿಗಳಾಗಿ ಜ್ಯೋತಿ ಸೇವಾ ಕೇಂದ್ರ ಟ್ರಸ್ಟ್ ವ್ಯವಸ್ಥಾಪಕಿ ಸಿಸ್ಟರ್ ಲೂಸಿ ಪ್ರಿಯ ಬಿ.ಎಸ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ಹಿರಿಯ ನ್ಯಾಯವಾದಿ ಚಂದ್ರಶೇಖರ ಅವಂಟಿ, ಉದ್ದಿಮೆದಾರ ಅಣ್ಣರಾವ ಪಾಟೀಲ ಮುಡಬೂಳ, ಜೈ ಹನುಮಾನ ಆಯಿಲ್ ಟ್ರೇಡರ್ಸ್ ಸಂಪತಕುಮಾರ ಸಜ್ಜನ್, ಮುಸ್ಲಿಂ ಸಮಾಜದ ಮುಖಂಡ ಮುಕ್ತಾರ ಪಟೇಲ್, ಪರಸಭೆ ಸದಸ್ಯ ವಿನೋದ ಗುತ್ತೇದಾರ, ಉದ್ದಿಮೆದಾರ ಶಿವರೆಡ್ಡಿ ಪಾಲಪ್, ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ತಾಲೂಕು ಮಟ್ಟದ ಆದರ್ಶ ಬಸವಶ್ರೀ ಪ್ರಶಸ್ತಿ ಪುರಸ್ಕೃತರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಆದರ್ಶ ಬಸವಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಆಯ್ಕೆ ಪಟ್ಟಿ ಈ ಕೆಳಗಿನಂತಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ಮುಸ್ಲಿಂ ಸಮಾಜದ ಮುಖಂಡ ಮುಕ್ತಾರ್ ಅಹಮ್ಮದ ಪಟೇಲ್, ಜ್ಯೋತಿ ಸೇವಾ ಕೇಂದ್ರದ ವ್ಯವಸ್ಥಾಪಕಿ ಸಿಸ್ಟರ್ ಲೂಸಿ ಪ್ರಿಯ ಬಿ.ಎಸ್, ಶ್ರೀ ಗಂಗಾಪರಮೇಶ್ವರಿ ಬಿ.ಎಡ್. ಕಾಲೇಜಿನ ಪ್ರಾಚಾರ್ಯ ಡಾ. ರಾಜಶೇಖರ ಜಿ.ಆರ್, ಸಿಪಿಐ ಚಂದ್ರಶೇಖರ ತಿಗಡಿ, ಚಿಂಚೋಳಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಪಾಲಾಮೂರ್, ಪತ್ರಕರ್ತ ವಿರೇಂದ್ರಕುಮಾರ ಕೊಲ್ಲೂರ, ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ, ಪತ್ರಕರ್ತ ಕಾಶಿನಾಥ ಗುತ್ತೇದಾರ, ವಾಡಿ ಗೀತಾ ಪಾಠಶಾಲೆಯ ಸಂಚಾಲಕ ಬಿ.ಕೆ. ಕಾಳಪ್ಪ ಬಡಿಗೇರ, ಎಸ್ಬಿಐ ವ್ಯವಸ್ಥಾಪಕ ನಟೇಶ ವಾಯ್.ಎಸ್, ಕರದಾಳ ಪಾರಂಪರಿಕ ಆರ್ಯುವೇದ ವೈದ್ಯ ವೇದಮೂರ್ತಿ ಶಿವಲಿಂಗಯ್ಯ ಸ್ವಾಮಿ ಮಠಪತಿ, ಸರಕಾರಿ ಐ.ಟಿ.ಐ ಕಾಲೇಜಿನ ಪ್ರಾಚಾರ್ಯ ತಾಜುದ್ದಿನ್ ಯರಗಲ್, ನಿವೃತ್ತ ಶಿಕ್ಷಕ ಮಲ್ಲಣ್ಣ ಮೂಡಬೂಳ, ಪತಂಜಲಿ ಯೋಗ ಸಮಿತಿಯ ವೀರಣ್ಣ ಮಹಾದೇವಪ್ಪ ಶಿಲ್ಪಿ, ಶ್ರೀವೈರಾಗ್ಯ ಶ್ರೀನಿಧಿ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ವೆಂಕಟಮ್ಮ ಮಹಾದೇವಪ್ಪ ಪಾಲಪ್, ಕಲಬುರಗಿ ಬಸವ ಬಳಗ ಜ್ಞಾನ ಸಂಪತ್ತು ವೇದಿಕೆಯಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಗುತ್ತೇದಾರ, ಬಿ.ಆರ್.ಸಿ ದೊಡ್ಡಬಸಮ್ಮ ಬಿ. ಶೆಟ್ಟರ್, ದಂಡೋತಿ ಅಂಗನವಾಡಿ ಮೇಲ್ವಿಚಾರಕಿ ಶೋಭಾ ಕೆ. ಶೆಟ್ಟಿ, ಎಸ್.ಬಿ. ಕಂಪ್ಯೂಟರ್ ಟ್ರೇನಿಂಗ್ ಸೆಂಟರ್ ಮುಖ್ಯಸ್ಥ ಸುಭಾಷ ಬೆನಕನಳ್ಳಿ, ಸಂಗೀತಗಾರ ಚನ್ನವೀರ ಅಮೃತಪ್ಪ ಬೆಳಗುಂಪಾ,ಹೊನಗುಂಟಾ ದೈಹಿಕ ಶಿಕ್ಷಕ ಹಣಮಂತರಾವ ಬಿರಾದಾರ, ಯನಗುಂಟೆ ಸಹ ಶಿಕ್ಷಕ ಮೈಲಾರಲಿಂಗ ಹೊನ್ನಾವರ್, ಚಿತ್ತಾಪರ ಶಿಕ್ಷಕ ಶರಣಪ್ಪ ಬಿರಾದಾರ, ಬಿಇಒ ಕಚೇರಿಯ ಗುರುಬಸಪ್ಪಾ, ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಆರ್.ಸಿ. ಸಾಜೀದ್ ಖಾನ್, ರಾಜೋಳಾ ಶಿಕ್ಷಕ ತ್ರಿವಿಕ್ರಮ ಸುಧೀರ ಶೆಟ್ಟಿ, ಮೋಗಲಾ ಮುಖ್ಯ ಗುರು ಸುರೇಶ್ ಸರಾಫ್, ಚಿತ್ತಾಪುರ ಬಸ್ ಚಾಲಕ ಗೋಸಯ್ಯ ಸ್ವಾಮಿ ಬಸ್ ಚಾಲಕ, ಪೇಠ ಚಿತ್ತಾಪುರ ಶಿಕ್ಷಕಿ ಕು. ಪ್ರೇಮಲತಾ, ಅಳ್ಳೋಳ್ಳಿ ಆಶಾ ಕಾರ್ಯಕರ್ತೆ ಅನುಸುಯಾ, ಡೋಣಗಾಂವ ಅಂಗನವಾಡಿ ಕಾರ್ಯಕರ್ತೆ ಜಯಶ್ರೀ.
ಸುದ್ದಿಗೋಷ್ಠಿಯಲ್ಲಿ ಬಿ.ಕೆ.ವೀಣಾ, ಪ್ರಧಾನ ಕಾರ್ಯದರ್ಶಿ ಮೌಲಾನ ಸಾಹೇಬ್ ಮಕಾಂದಾರ್, ಉಪಾಧ್ಯಕ್ಷರಾದ ಮನೋಹರ ಹಡಪದ, ಸುಮಂಗಲಾ ಜಾಡರ್, ಸಹ ಕಾರ್ಯದರ್ಶಿ ಶಿವಲೀಲಾ ಬೆಟಗೇರಿ, ನಿರ್ದೇಶಕಿ ಗುಂಡಮ್ಮ ಇದ್ದರು.