ಚಿತ್ತಾಪುರ ಆಶ್ರಯ ಕಾಲೋನಿಯ ಗಣೇಶನ ಲಡ್ಡು 57,501 ರೂಪಾಯಿಗೆ ಹರಾಜು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಶ್ರೀ ಗಣೇಶ ಮಿತ್ರ ಮಂಡಳಿ ವತಿಯಿಂದ 11 ದಿನದ ಗಣೇಶ ಉತ್ಸವದ ಕೊನೆಯ ದಿನವಾದ ಗುರುವಾರ ಲಡ್ಡು ಹರಾಜು ಮಾಡಲಾಯಿತು. ನಿತಿನ್ ಟುಬಾಕ್ ಅವರು ಹರಾಜು ಪ್ರಕ್ರಿಯೆ ಮೂಲಕ ರೂ. 57,501 ನೀಡಿ ಲಡ್ಡು ಪಡೆದುಕೊಂಡರು.
ಪ್ರತಿದಿನ ವಿಶೇಷ ಪೂಜೆ ಮಹಾಪ್ರಸಾದ, ಮಾತೆಯರಿಗಾಗಿ ರಂಗೊಲಿ ಸ್ಪರ್ದೆ, ಆಶ್ರಯ ಕಾಲೋನಿಯ ಯುವಕರಿಗಾಗಿ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಿ ಅದರಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಅದ್ಯಕ್ಷ ಶಾಂತು ಗಣಪೂರಕರ್, ಪರಶುರಾಮ್, ಅಂಭರೀಷ್, ಅರುಣ ಯರಗಲ್, ಸಾಗರ ಚಿತ್ತೇಕರ್, ಮೇಘರಾಜ್ ಗುತ್ತೇದಾರ, ನಾಗರಾಜ್ ತಳವಾರ, ಸುಭಾಷ್ ಸೇರಿದಂತೆ ಮಂಡಳಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
