ಆಶ್ರಯ ಕಾಲೋನಿ ಮನೆಗಳ ಮೇಲೆ ಹಾದು ಹೋಗಿದ್ದ ವಿದ್ಯುತ್ ಲೈನ್ ಬೇರೆಡೆ ಸ್ಥಳಾಂತರಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿ ಮನೆಗಳ ಮೇಲೆ ಎಸ್.ಟಿ ವಿದ್ಯತ್ ಲೈನ್ ಹಾದು ಹೋಗಿದ್ದು ಅದನ್ನು ಬೇರೆ ಕಡೆ ಸ್ಥಾಳಂತರಗೊಳಿಸಬೇಕು ಎಂದು ಮಲ್ಲಿಕಾರ್ಜುನ ದರರ್ತನೂರ, ರಾಜಶೇಖರ ಕಡ್ಡಿ, ಜಗದೀಶ ದೊಡ್ಡಮನಿ, ಶರಣಪ್ಪ ಹಡಪದ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ನಾವುಗಳು ಎರಡ್ಮೂರು ಬಾರಿ ಅರ್ಜಿಯನ್ನು ಕೊಟ್ಟಿರುತ್ತೇವೆ. ಆದರೆ ಸಂಭಂದಪಟ್ಟ ಅಧಿಕಾರಿಗಳು ಬಂದು ಸರಿಪಡಿಸದೆ ಹಾಗೇ ಬಿಟ್ಟಿರುತ್ತಾರೆ. ಎಸ್.ಟಿ ವಿದ್ಯತ್ ಲೈನ್ ಆಶ್ರಯ ಮನೆಗಳ ಮೇಲುಗಡೆ ಹಾದು ಹೋಗಿವೆ ಇದರಿಂದ ಅನೇಕ ಅವಘಡಗಳು ಸಂಭವಿಸಿದ್ದು ಆದ್ದರಿಂದ ಜೀವ ಆಪಾಯದಿಂದ ಪಾರಾಗಿರುವ ಘಟನೆಗಳು ಸಂಭವಿಸಿವೆ. ಆದ್ದರಿಂದ ಯಾವುದೇ ಜೀವ ಹಾನಿಯಾಗುವ ಮುಂಚೆ ಇದನ್ನು ಸರಿಪಡಿಸಬೇಕಾಗಿ ವಿನಂತಿಸಿದ್ದಾರೆ.
ನಮ್ಮ ಮನೆಗಳಿಗೆ ಮತ್ತು ಅಕ್ಕಪಕ್ಕದ ಮನೆಯವರಿಗೆ ಜೀವ ಹಾನಿಯಾಗುವ ಸಂಭವ ಇರುತ್ತದೆ. ಈಗಾಗಲೇ ಇದರ ಅನುದಾನ ಮಂಜೂರಾತಿ ಆದರೂ ಕೂಡ ಜೆಸ್ಕಾಂ ಹಾಗೂ ಪುರಸಭೆಯವರ ನಿರ್ಲಕ್ಷ್ಯದಿಂದ ಕೆಲಸ ಹಾಗೇ ನೆನೆಗುದಿಯಲ್ಲಿದೆ. ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳಿಗೆ ಹೇಳಿದರೂ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರುವುದಿಲ್ಲ. ಇದಕ್ಕೆ ಸಂಭಂದ ಪಟ್ಟ ಇಲಾಖೆಯವರ ಗಮನಕ್ಕೆ ತಂದು ಈ ವಿದ್ಯತ್ ಕಂಬಗಳನ್ನು ಕೊಡಲೇ ಬೇರೆ ಕಡೆ ಸ್ಥಳಾಂತರಿಸಬೇಕಾಗಿ ಆಶ್ರಯ ಕಾಲೋನಿಯ ಸಾರ್ವಜನಿಕರ ಪರವಾಗಿ ಮನವಿ ಮಾಡಿದ್ದಾರೆ.

