ಚಿತ್ತಾಪುರದಲ್ಲಿ ಬಾಬು ಜಗಜೀವನರಾಮ್ ಪರಿನಿರ್ವಾಣ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಾಬು ಜಗಜೀವನರಾಮ್ ನಗರ ಹಾಗೂ ಬಸವ ನಗರದಲ್ಲಿ ಭಾನುವಾರ ಮಾಜಿ ಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರು 39 ನೇ ಪರಿನಿರ್ವಾಣ ದಿನ ಆಚರಿಸಲಾಯಿತು.
ಸಮಿತಿ ಅಧ್ಯಕ್ಷ ರಾಜಣ್ಣ ಕರದಾಳ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಮುಗುಳಕರ್, ನಿಂಗಪ್ಪ ಮುಗುಳಕರ್, ರಮೇಶ್ ಕಟ್ಟಿ, ಮರೇಪ್ಪ ಸಂದೇನ್, ಶಿವುಕುಮಾರ ಯಾದಗಿರಿ, ಸುಕುಮಾರ್, ಚಂದ್ರಶೇಖರ ಡೀಲರ್, ತಿಪ್ಪಣ್ಣ ಬೊಮ್ಮನಳ್ಳಿಕರ್, ರಾಮ ತೊನಸನಳ್ಳಿಕರ್, ನಾಗಪ್ಪ ಹೊಸ್ಸುರಕರ್ ಸೇರಿದಂತೆ ಇತರರು ಇದ್ದರು.

