ಚಿತ್ತಾಪುರ ತಾಲೂಕು ಅಧ್ಯಕ್ಷರಾಗಿ ಲಕ್ಷ್ಮಿಕಾಂತ ತಾಂಡೂರಕರ್ ಆಯ್ಕೆ | ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಭಾನುವಾರ ನಡೆದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರ ಸಹಮತದಿಂದ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು ತಾಲೂಕು ಅಧ್ಯಕ್ಷರಾಗಿ ಲಕ್ಷ್ಮಿಕಾಂತ ತಾಂಡೂರಕರ್ ಆಯ್ಕೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ಲಕ್ಷ್ಮಿಕಾಂತ ತಾಂಡೂರಕರ್, ದಿನದ 24 ಗಂಟೆ ಕಾಲ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಪರವಾಗಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದರು. ಸಂಘದ ಘನತೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಆಟೋ ಚಾಲಕರ ಧ್ವನಿಯಾಗಿ ದುಡಿಯುತ್ತೇನೆ ಇದಕ್ಕೆ ಎಲ್ಲರೂ ಕೈಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಉಳಿದಂತೆ ತಾಲೂಕು ಉಪಾಧ್ಯಕ್ಷರಾಗಿ ಶುಭಾಷ್ ಗುತ್ತೇದಾರ, ಖಜಾಂಚಿಯಾಗಿ ಮುನಿಯಪ್ಪ ಆಯ್ಕೆಯಾಗಿದ್ದಾರೆ.
ರೈಲ್ವೆ ಸ್ಟೇಷನ್ ಅಧ್ಯಕ್ಷರಾಗಿ ಭೀಮು ಚೌದರಿ, ಉಪಾಧ್ಯಕ್ಷರಾಗಿ ವಿನೋದ್ ರಾಥೋಡ, ಲಾಡ್ಜಿಂಗ್ ಕ್ರಾಸ್ ಅಧ್ಯಕ್ಷರಾಗಿ ಸೂರ್ಯಕಾಂತ್ ಯರಗಲ್, ಉಪಾಧ್ಯಕ್ಷರಾಗಿ ಶೇಕ್ ಹಸೇನ್, ನಾಗಾವಿ ಚೌಕ್ ಅಧ್ಯಕ್ಷರಾಗಿ ಕುಮಾರ್ ಚವ್ಹಾಣ, ಉಪಾಧ್ಯಕ್ಷರಾಗಿ ಸೂರಪ್ಪ ಕಡೆಸೂರ್, ಚಿತ್ತಾವಲಿ ಚೌಕ್ ಅಧ್ಯಕ್ಷರಾಗಿ ಸತ್ತರ್, ಉಪಾಧ್ಯಕ್ಷರಾಗಿ ಆಸಿಫ್ ತಾಜ್, ದಿಗ್ಗಾಂವ ಸ್ಟಾಂಡ್ ಅಧ್ಯಕ್ಷರಾಗಿ ಭೀಮಣ್ಣ ಬನ್ನೂರಕರ್, ಉಪಾಧ್ಯಕ್ಷರಾಗಿ ಶರಣು ಪೂಜಾರಿ, ಬಸ್ ಸ್ಟ್ಯಾಂಡ್ ಅಧ್ಯಕ್ಷರಾಗಿ ಸುಭಾಷ್ ಕಾಶಿ ( ಡಾಲಿ), ಉಪಾಧ್ಯಕ್ಷರಾಗಿ ಮಾರುತಿ ಜಾದವ, ಆಶ್ರಯ ಕಾಲೋನಿ ಸ್ಟ್ಯಾಂಡ್ ಅಧ್ಯಕ್ಷರಾಗಿ ಕಾಶಿನಾಥ್ ಬಾಗೋಡಿ, ಉಪಾಧ್ಯಕ್ಷರಾಗಿ ಸಿದ್ದಪ್ಪ ರಾಮನಳ್ಳಿ ಅವರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶಂಕರ್ ನಾಗ್ ಅಭಿಮಾನ ಬಳಗ ರಾವೂರ್ ಅಧ್ಯಕ್ಷರು ಸೇರಿದಂತೆ ಇತರರು ಇದ್ದರು.

