ಚಿತ್ತಾಪುರ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಉಪ ಕೃಷಿ ನಿರ್ದೇಶಕರು ಮತ್ತು ಕೃಷಿ ಅಧಿಕಾರಿಗಳ ತಂಡ ದಿಡೀರ್ ಭೇಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಚಿತ್ತಾಪುರ ಪಟ್ಟಣದ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಸೇಡಂ ಉಪವಿಭಾಗದ ಉಪ ಕೃಷಿ ನಿರ್ದೇಶಕಿ ಅನುಸುಯಾ ಹೂಗಾರ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರೆ, ಕೃಷಿ ಅಧಿಕಾರಿಗಳಾದ ರವಿಂದ್ರ ಕುಮಾರ ಮತ್ತು ಇತರೆ ಅಧಿಕಾರಗಳ ತಂಡದಿಂದ ದಿಡೀರ್ ಭೇಟಿ ನೀಡಿ ತಪಾಸಣೆ ಕೈಗೊಂಡರು.
ಪಟ್ಟಣದ ಕೃಷಿ ಪರಿಕರ ಮಾರಾಟ ಮಳಿಗೆಗಳಾದ ನಮ್ಮ ಗ್ರೋಮರ್ ಸೆಂಟರ್ ನ ಗೋದಾಮು ವೀಕ್ಷಣೆ ಮಾಡಿ ಗೊಬ್ಬರದ ದಾಸ್ತಾನು ಪರಿಶೀಲನೆ ನಡೆಸಿ, ರೈತರಿಗೆ ನಿಯಮಿತವಾಗಿ ಡಿಎಪಿ ಮತ್ತು ಇತರೆ ಗೊಬ್ಬರಳನ್ನು ವಿತರಿಸಲು ಸೂಚಿಸಿದರು ಮತ್ತು ನ್ಯಾನೊ ಡಿಎಪಿ ಮತ್ತು ನ್ಯಾನೊ ಉರಿಯಾ ಬಳಕೆ ಕುರಿತು ಮಾಹಿತಿ ನಿಡಿದರು ನಂತರ ನಾಲವಾರ ನ್ಯುವ ಅಸೆಂಟರ್ ಮಾರಾಟ ಮಳಿಗೆಗಳಿಗೆ ಬೇಟಿ ನಿಡಿ ಬಿಲ್ಲು ಪುಸ್ತಕ ರೇಟ್ ಬೋರ್ಡ್, ಪಾರಂ ನಂ-ಓ ಗಳನ್ನು ಪರಿಶಿಲಿಸಿದರು ಮತ್ತು ಬೀಜ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ನಿಗದಿತ ದರದಲ್ಲಿಯೇ ಮಾರಾಟ ಮಾಡಲು ಸೂಚಿಸಿದರು. ಒಂದು ವೇಳೆ ರೈತರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಹಾಗೂ ಪರವಾನಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

