Oplus_0

ಚಿತ್ತಾಪುರ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಅನ್ನದಾಸೋಹ ಮತ್ತು ಉಚಿತ ಔಷಧ ವಿತರಣಾ ಕಾರ್ಯಕ್ರಮ ಯಶಸ್ವಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವದ ನಿಮಿತ್ತ ಚಿತ್ತಾಪುರ ತಾಲೂಕು ಮೆಡಿಕಲ್ ಅಸೋಸಿಯೇಷನ್ (CTCDA) ವತಿಯಿಂದ ಆಯೋಜಿಸಲಾದ ಅನ್ನದಾಸೋಹ ಮತ್ತು ಉಚಿತ ಔಷಧ ವಿತರಣಾ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮವು ಸಂಘಟನೆಯ ಒಗ್ಗಟ್ಟು, ಪರಸ್ಪರ ಸಹಕಾರ ಮತ್ತು ಸಮಾಜಸೇವೆಯ ಮನೋಭಾವಕ್ಕೆ ಸಾಕ್ಷಿಯಾಯಿತು. ದೂರ ದೂರದಿಂದ ಆಗಮಿಸಿದ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಂಡರು.

ಈ ಕಾರ್ಯಕ್ರಮಕ್ಕೆ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಚಾಲನೆ ನೀಡಿದರು. ಪಿಎಸ್ಐ ಮಂಜುನಾಥ ರೆಡ್ಡಿ, ಅಸೋಸಿಯೇಷನ್ ಅಧ್ಯಕ್ಷ ಸೈಯದ್ ನಿಜಾಮುದ್ದೀನ್ ಚಿಸ್ತಿ, ಗೌರವಾಧ್ಯಕ್ಷ ವಿವೇಕ್ ಹಂಚಾಟೆ,  ಸುಭಾಷ್ ಹುಳುಗೋಳ್ ಹಾಗೂ ಪ್ರೋಗ್ರಾಂ ಕಮಿಟಿ ಅಧ್ಯಕ್ಷ ಈಶ್ವರಾಜ್ ಹಣಿಕೇರಾ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವಿರೂಪಾಕ್ಷಪ್ಪ ಅಳ್ಳೊಳ್ಳಿ, ಶಿವಕುಮಾರ್ ಗುರುಮಿಠಕಲ್,  ಶಿವಕುಮಾರ್ ಸುನಾರ್, ಶ್ರೀಕಾಂತ್ ಪಾಟೀಲ್,  ಸಂಜಯಕುಮಾರ್ ಹುಡೇದಾರ, ವಿಶ್ವರಾಧ್ಯ ಹುಳುಗೋಳ್, ವೆಂಕಟ ರೆಡ್ಡಿ ಭೀಮನಳ್ಳಿ, ದೇವು ಅಲ್ಲೂರ ಹಾಗೂ ಜೈ ಭವಾನಿ ಮೆಡಿಕಲ್ ಅವರ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

“ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಔಷಧಿಗಳ ವಿತರಣೆ ಮಾಡುವ ಸೇವೆಯನ್ನು ಕಳೆದ ಮೂರು ವರ್ಷಗಳಿಂದ ತಾಲೂಕು ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಮಾಡುತ್ತಾ ಬರಲಾಗಿದೆ. ಪಲ್ಲಕ್ಕಿ ಉತ್ಸವಕ್ಕೆ ಬರುವ ಭಕ್ತಾದಿಗಳು ಸಹ ಇದರ ಸದುಪಯೋಗ ಪಡಿಸಿಕೊಂಡಿರುವುದು ನಮಗೂ ಖುಷಿಯನ್ನು ಉಂಟುಮಾಡಿದೆ”.-ಸೈಯದ್ ನಿಜಾಮುದ್ದೀನ್ ಚಿಸ್ತಿ ಅಸೋಸಿಯೇಷನ್ ಅಧ್ಯಕ್ಷರು.

Spread the love

Leave a Reply

Your email address will not be published. Required fields are marked *

error: Content is protected !!