ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ್ ಚಿಸ್ತಿ ಅವರನ್ನೇ ಮುಂದುವರಿಕೆಗೆ ಮನವಿ
ನಾಗಾವಿ ಎಕ್ಸಪ್ರೆಸ್
ವಾಡಿ: ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ಗುರುತಿಸಿಕೊಂಡಿರುವ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ್ ಚಿಸ್ತಿ ಅವರನ್ನೇ ಇನ್ನೊಂದು ಅವಧಿಗೆ ಮುಂದುವರಿಸಬೇಕು ಎಂದು ಇಂಗಳಗಿ ಗ್ರಾಮದ ಕಾಂಗ್ರೆಸ್ ಯುವ ನಾಯಕ ನಬಿ ಪಠಾಣ್ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.
ಸೈಯದ್ ಮಹೆಮೂದ್ ಸಾಹೇಬ್ ಅವರು ಅಧ್ಯಕ್ಷರಾದ ಬಳಿಕ ವಾಡಿ ಬ್ಲಾಕ್ ನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಿದ್ದಾರೆ. ಯುವಕರನ್ನು ಪಕ್ಷದತ್ತ ಸೆಳೆಯುವಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವಲ್ಲಿ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಜಾತಿಯ ಮತದಾರರನ್ನು ಪಕ್ಷ ಸಂಘಟನೆಗೆ ತರುವಲ್ಲಿ ಸಾಹೇಬ್ ಅವರ ಕೊಡುಗೆ ಪಕ್ಷ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯ ಹಿತದೃಷ್ಟಿಯಿಂದ ಅವರಂತಹ ಅನುಭವಿ ಮತ್ತು ನಿಷ್ಠಾವಂತ ನಾಯಕರ ಅವಶ್ಯಕತೆ ಇದ್ದು, ಅವರನ್ನು ಮತ್ತೊಂದು ಅವಧಿಗೆ ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮುಂದುವರಿಸಬೇಕು ಎಂದು ನಬಿ ಪಠಾಣ್ ಒತ್ತಾಯಿಸಿದ್ದಾರೆ.

