ಚಿತ್ತಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಭೀಮಣ್ಣ ಸಾಲಿ, ಉಪಾಧ್ಯಕ್ಷರಾಗಿ ವೀರುಪಾಕ್ಷಪ್ಪ ಗಡ್ಡದ್ ಅವಿರೋಧ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಅಧ್ಯಕ್ಷರಾಗಿ ಅಳ್ಳೋಳ್ಳಿ ಸಾಲಗಾರರ ಕ್ಷೇತ್ರದಿಂದ ಭೀಮಣ್ಣ ಸಾಲಿ ಹಾಗೂ ಉಪಾಧ್ಯಕ್ಷರಾಗಿ ಚಿತ್ತಾಪುರ ಸಾಲಗಾರರಲ್ಲದ ಕ್ಷೇತ್ರದಿಂದ ವೀರುಪಾಕ್ಷಪ್ಪ ಗಡ್ಡದ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.
ಪಿಎಲ್‌ಡಿ ಬ್ಯಾಂಕ್ ನಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 14 ನಿರ್ದೇಶಕರ ಪೈಕಿ 12 ನಿರ್ದೇಶಕರು ಹಾಜರಿದ್ದರು ಇಬ್ಬರು ಗೈರಾಗಿದ್ದರು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದವು, ಪ್ರತಿಸ್ಪರ್ಧಿ ನಾಮಪತ್ರಗಳು ಸಲ್ಲಿಸದೇ ಇರುವುದರಿಂದ ನಾಮಪತ್ರ ಪರಿಶೀಲನೆ ನಡೆಸಿ ಅಂತಿಮವಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ವೀಕ್ಷಕರಾದ ಕಲಬುರಗಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಜಾರ್ ಆಲಂ ಖಾನ್, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ವಾಡಿ ಅಧ್ಯಕ್ಷ ಮಹಿಮೂದ್ ಸಾಹೇಬ್, ಪ್ರಮುಖರಾದ ಶಿವಾನಂದ ಪಾಟೀಲ, ಜಗಣ್ಣಗೌಡ ರಾಮತೀರ್ಥ, ಸುನೀಲ್ ದೊಡ್ಡಮನಿ, ಚಂದ್ರಶೇಖರ ಕಾಶಿ, ಅಣ್ಣಾರಾವ ಪಾಟೀಲ್ ಮುಡಬೂಳ, ಶಿವರುದ್ರಪ್ಪ ಭೀಣಿ, ಶಾಂತಣ್ಣ ಚಾಳೀಕಾರ, ಮುಕ್ತಾರ್ ಪಟೇಲ್, ಶೀಲಾ ಕಾಶಿ, ದೇವು ಯಾಬಾಳ, ಬಸವರಾಜ ಹೊಸಳ್ಳಿ, ಬಸಣ್ಣ ತಳವಾರ, ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರ, ದೇವೇಂದ್ರ ಅರಣಕಲ್, ಅಶೋಕ ನಿಪ್ಪಾಣಿ, ಲಕ್ಷ್ಮಿಕಾಂತ ಸಾಲಿ, ಪ್ರಭು ಹಳಕರ್ಟಿ, ಶಿವರಾಜ್ ಪಾಳೇದ್, ಪಾಶಾಮಿಯ್ಯಾ ಖುರೇಶಿ, ನಿಂಗಾರೆಡ್ಡಿ ಭೀಮನಳ್ಳಿ, ಸಂತೋಷ ಪೂಜಾರಿ, ಭೀಮು ಹೋತಿನಮಡಿ, ಶ್ರೀನಿವಾಸರೆಡ್ಡಿ ಪಾಲಪ್, ನಜೀರ್ ಆಡಕಿ, ನಾಗಯ್ಯ ಗುತ್ತೇದಾರ, ರಶೀದ ಸೇಠ್, ಕರಣಕುಮಾರ ಅಲ್ಲೂರ್, ನಿಂಗಣ್ಣ ಹೆಗಲೇರಿ, ನಾಗರೆಡ್ಡಿ ಗೋಪಸೇನ್, ಮಹೇಮೂಬ್ ಪಟೇಲ್, ಚಂದ್ರಶೇಖರ ಇವಣಿ, ಆನಂದ್ ಬೆನೂರು ಇವಣಿ, ಜಗನಾಥ್ ಗಡ್ಡದ್ ಸೇರಿದಂತೆ ಇತರರು ಇದ್ದರು.
