ಚಿತ್ತಾಪುರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ವಿಚಾರಣೆ ಮತ್ತೇ ಡಿ.11 ಕ್ಕೆ ಮುಂದೂಡಿದ ಹೈಕೋರ್ಟ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸ್ಥಳೀಯ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಡಿಸೆಂಬರ್ 5 ರಂದು ವಿಚಾರಣೆ ನಡೆದು ಅಂತಿಮ ಆದೇಶ ಹೊರಬೀಳಬಹುದು ಎಂದು ಅಂದುಕೊಂಡಿದ್ದ ಪುರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಮತ್ತು ಸದಸ್ಯರಿಗೆ ಮತ್ತೇ ನಿರಾಶೆ ಉಂಟುಮಾಡಿದೆ. ಕಾರಣ ಹೈಕೋರ್ಟ್ ಮತ್ತೇ ಡಿ.11ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಹೈಕೋರ್ಟ್ ಕಳೆದ ನಾಲ್ಕು ತಿಂಗಳಿಂದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವಿಚಾರಣೆ ಕುರಿತು ಪದೇ ಪದೇ ದಿನಾಂಕ ಮುಂದೂಡುತ್ತಿರುವುದು ಪುರಸಭೆಯ ಸದಸ್ಯರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಅಲ್ಪ ಅಧಿಕಾರಾವಧಿ ಇರುವಾಗ ಚುನಾವಣೆ ವಿಷಯ ಕೋರ್ಟ್ ನಲ್ಲಿ ನೆನೆಗುದಿಯಲ್ಲಿರುವುದು ಎಲ್ಲರಿಗೂ ಕಿರಿಕಿರಿಯನ್ನುಂಟು ಮಾಡಿದೆ. ಆದರೂ ಕೋರ್ಟ್ ಅಂತಿಮ ತೀರ್ಪು ಬರುವವರಿಗೂ ಕಾಯಬೇಕಿರುವುದು ಅನಿವಾರ್ಯತೆ ಇದೆ.