ಚಿತ್ತಾಪುರ ರೈಲು ನಿಲ್ದಾಣದಲ್ಲಿ ಎಲ್.ಟಿ.ಟಿ ಕೊನಾರ್ಕ್ ರೈಲು ನಿಲ್ಲಿಸಲು ಕರವೇ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರೈಲ್ವೆ ಸ್ಟೇಷನದಲ್ಲಿ ಲೋಕಮಾನ್ಯ ತಿಲಕ್ (ಎಲ್.ಟಿ.ಟಿ) ಕೊನಾರ್ಕ್ ರೈಲು ಗಾಡಿಗಳನ್ನು ನಿಲ್ಲಿಸುವ ಕ್ರಮ ಕೈಗೊಳ್ಳಬೇಕು ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ ಕಲಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈಗಾಗಲೇ ಚಿತ್ತಾಪುರ ರೈಲ್ವೆ ಸ್ಟೇಷನದಲ್ಲಿ ರೈಲ್ವೆ ಗಾಡಿಗಳು ನಿಲ್ಲಲಾರದ ಕಾರಣ ಪ್ರಯಾಣಿಕರಿಗೆ, ವ್ಯಾಪರಸ್ಥರಿಗೆ ಅನಾನುಕೂಲವಾಗುತ್ತಿದೆ. ಇಲ್ಲಿ ಹೊಸದಾಗಿ ಸಿಮೆಂಟ್ ಕಂಪನಿಗಳು ಆರಂಭವಾಗಿದ್ದರಿಂದ ಬೇರೆ ಬೇರೆ ರಾಜ್ಯದ ಪ್ರಯಾಣಿಕರು, ನೌಕರರು ಆಗಮಿಸುತ್ತಿದ್ದಾರೆ. ಈಗಾಗಲೇ ಸದರಿ ರೈಲು ಗಾಡಿಗಳನ್ನು ನಿಲ್ಲಿಸುವಂತೆ ಮಾಜಿ ರೈಲ್ವೆ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಹಾಗೂ ಪಿ.ಯು.ಎಸ್.ಗೋಯಲ್ ರವರಿಗೆ ಮನವಿ ಸಲ್ಲಿಸಿದರು ಸಹಿತ ಸ್ಪಂದನೆ ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ.
ಆದ ಕಾರಣ ತಾವುಗಳು ಲೋಕಮಾನ್ಯ ತಿಲಕ್ (ಎಲ್.ಟಿ.ಟಿ) ಕೊನಾರ್ಕ್ ರೈಲು ಗಾಡಿಗಳು ನಿಲ್ಲಿಸುವಂತೆ ಕೂಡಲೇ ಸಂಬಂಧಪಟ್ಟ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಶೀಘ್ರವಾಗಿ ಇಲ್ಲಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದರು.
ಕರವೇ ಸದಸ್ಯರಾದ ವಿಶ್ವರಾಧ್ಯ ಪೂಜಾರಿ, ಮೇರಾಜ್ ಪಟೇಲ್, ಚಂದ್ರಕಾಂತ ಗೌಳಿ ಸೇರಿದಂತೆ ಇತರರು ಇದ್ದರು.