ಚಿತ್ತಾಪುರ ಪಟ್ಟಣದಲ್ಲಿ 45 ಲಕ್ಷದ ಡಾಂಬರೀಕರಣ ರಸ್ತೆ ಕಾಮಗಾರಿಗೆ ಅನ್ನಪೂರ್ಣ ಕಲ್ಲಕ್ ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ರೈಲ್ವೆ ಸ್ಟೇಷನ್ ಹತ್ತಿರ 45 ಲಕ್ಷದ ವೆಚ್ಚದಲ್ಲಿ ಕೈಗೊಂಡ ಡಾಂಬರೀಕರಣ ರಸ್ತೆ ಕಾಮಗಾರಿಗೆ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಗುರುವಾರ ಪೂಜೆ ನೆರವೇರಿಸಿ ಚಾಲನೆ ನೀಡಿದರು.
2023-24ನೇ ಸಾಲಿನ ಕೆಕೆಆರ್’ಡಿಬಿ ಅನುದಾನ ಅಡಿಯಲ್ಲಿ ಪಿಎಂಜಿಎಸ್’ವೈ ಇಲಾಖೆಯು ರೈಲ್ವೆ ನಿಲ್ದಾಣದಿಂದ ರಾಘವೇಂದ್ರ ಹೊಟೇಲ್ ವರೆಗೆ ಹಾಗೂ ಪುರಸಭೆಯಿಂದ ತಹಸೀಲ್ ಕಚೇರಿಯ ವರೆಗೆ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ ಕಾಶಿ, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ ಚವ್ಹಾಣ, ಸದಸ್ಯೆ ಸುಮಂಗಲಾ ಸಣ್ಣೂರಕರ್, ಮುಖಂಡರಾದ ನಾಗಪ್ಪ ಕಲ್ಲಕ್, ನಜೀರ ಆಡಕಿ, ಶರಣಪ್ಪ ಕೋರವಾರ, ಸಾಬೂ ಸಣ್ಣೂರಕರ್, ಪಿಎಂಜಿಎಸ್ ವೈ ಇಲಾಖೆಯ ಜೆಇಗಳಾದ ಶ್ಯಾಮ ಬಿರಾದಾರ, ಕಿರಣಸಿಂಗ್, ನಾಗರಾಜ, ಅಂಬರೀಶ ಸೇರಿದಂತೆ ಇತರರು ಇದ್ದರು.

