ಚಿತ್ತಾಪುರ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಮೂರು ಹುದ್ದೆಗಳಿಗೆ ಅರ್ಜಿ ಆಹ್ವಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ನಾಗಾವಿ ಕ್ಯಾಂಪಸ್ ನ ಪಿ ಎಮ್ ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಪಿ ಎಮ್ ಶ್ರೀ ಯೋಜನೆಯಡಿಯಲ್ಲಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಲಿಕವಾಗಿ 3 ವಿವಿಧ ಹುದ್ದೆಗಳ ಅವಶ್ಯಕತೆ ಇದ್ದು ಆಸಕ್ತಿಯುಳ್ಳವರು ಜು. 17 ರ ಒಳಗಾಗಿ ಅರ್ಜಿ ಸಲ್ಲಿಸುವುದು. ಸದರಿ ಹುದ್ದೆಗಳ ಕಾಲಾವಧಿ 31 ಮಾರ್ಚ್ 2027 ರವರೆಗೆ ಮಾತ್ರ ಎಂದು ಮುಖ್ಯಗುರು ಸಂತೋಷಕುಮಾರ ಜಮಾದಾರ ತಿಳಿಸಿದ್ದಾರೆ.
ಯೋಗ ಮತ್ತು ಕರಟೆ ಶಿಕ್ಷಕರು-ಮಾನ್ಯತೆ ಪಡೆದ ಸಂಸ್ಥೆಗಳಿಂದ ಯೋಗ ಮತ್ತು ಕರಟೆ ತರಬೇತಿ ಪಡೆದವರು ಅರ್ಹರು, ವೇತನ 12000, ಕಂಪ್ಯೂಟರ ಶಿಕ್ಷಕರು- BCA/B.SC (Computer Science) / B. Tech /B.E (IT/CS) OR Diploma in computer Science ಉತ್ತೀರ್ಣ ಮತ್ತು ಸಂಭಂಧಿಸಿದ ಸರ್ಟಿಫಿಕೇಟ್ ಕೋರ್ಸ್ ಉತ್ತೀರ್ಣ, ವೇತನ 25000, ಸಂಗೀತಾ ಮತ್ತು ನೃತ್ಯ ಶಿಕ್ಷಕರು-ತರಬೇತಿ ಪಡದ ಸಂಗೀತಾ ಶಿಕ್ಷಕರು / ನೃತ್ಯ ಭೋಧಕರು / ಸ್ಥಳೀಯ ಕಲಾವಿದರು / ಮಾನ್ಯತೆ ಪಡೆದ ಅಕಾಡೆಮಿಗಳ ವೃತ್ತಿಪರರು / ಸಂಸ್ಕೃತಿಕ ಸಂಸ್ಥೆಗಳಲ್ಲಿ ತರಬೇತಿ ಪಡೆದವರು /ಶಾಲಾ ಮಕ್ಕಳಿಗೆ ತರಬೇತಿ ನೀಡಿದ ಅನುಭವ ಇರುವವರು, ವೇತನ 12000.
ಷರತ್ತುಗಳು ಅನ್ವಯ: ಒಂದು ಹುದ್ದೆಗೆ ಎರಡಕ್ಕಿಂತ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದಲ್ಲಿ ನಿಗದಿತ ವಿದ್ಯಾರ್ಹತೆಯ ಅಂಕಗಳನ್ನು ಮತ್ತು ಅನುಭವದ ಆಧಾರದ ಪರಿಗಣಿಸಿ ಆಯ್ಕೆ ಮಾಡಲಾಗುವುದು, ಅರ್ಜಿಯನ್ನು ನಿಗದಿತ ದಾಖಲೆಗಳೊಂದಿಗೆ ಖುದ್ದಾಗಿ/ಪೋಸ್ಟ್ ಮೂಲಕ ಕಳುಹಿಸುವುದು, ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ, 6 ರಿಂದ 10ನೇ ತರಗತಿಯವರಿಗೆ ಬೋಧನೆ ಮಾಡಲು ಸಿದ್ಧರಿರಬೇಕು ಹೆಚ್ಚಿನ ಮಾಹಿತಿಗಾಗಿ- 9972775538, 8667091213 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

