Oplus_0

ತಾಲೂಕು ಆಡಳಿತ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ | ಅಂಬೇಡ್ಕರ್ ವ್ಯಕ್ತಿ ಅಲ್ಲ ಶಕ್ತಿ: ಬೊಮ್ಮನಳ್ಳಿಕರ್

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಅಂಬೇಡ್ಕರ್ ಅಂದರೆ ಜ್ಞಾನದ ಕಣಜ, ಅಂಬೇಡ್ಕರ್ ಅಂದರೆ ಚಿಂತಕ ವಿದ್ವಾಂಸಕ, ಅಂಬೇಡ್ಕರ್ ಅಂದರೆ ಕ್ರಾಂತಿ ಈ ನಿಟ್ಟಿನಲ್ಲಿ ಅಂಬೇಡ್ಕರ್ ಅಂದರೆ ವ್ಯಕ್ತಿ ಅಲ್ಲ ಶಕ್ತಿ ಎಂದು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿಕರ್ ಹೇಳಿದರು

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.ಅಂಬೇಡ್ಕರ್ ರವರ 135 ನೇ ಜಯಂತೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಸಮ ಸಮಾಜಕ್ಕೆ ಹೋರಾಡಿದವರು ಹೀಗಾಗಿ ಅವರನ್ನು ಒಂದು ಜಾತಿಗೆ ಸೀಮಿತರಾಗಿ ಮಾಡಬೇಡಿ. ಅವರು ರಚಿಸಿದ ಸಂವಿಧಾನದಿಂದಲೇ ಎಲ್ಲರಿಗೂ ಮೀಸಲಾತಿ ಹಾಗೂ ಅವಕಾಶಗಳು ಸಿಗುತ್ತಿವೆ ಎಂದರು.

ಉಪನ್ಯಾಸಕರಾಗಿ ಸೇಡಂ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ವಿಷ್ಣುವರ್ಧನ್ ಮೂಲಿಮನಿ ಮಾತನಾಡಿ, ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲ, ಜ್ಞಾನದ ಭಂಡಾರ ಎಂದು ಹೇಳಿದರು. 50 ಸಾವಿರಕ್ಕೂ ಹೆಚ್ಚು ಪುಸ್ತಕಗಳ ವೈಯಕ್ತಿಕ ಗ್ರಂಥಾಲಯ ಹೊಂದಿದ್ದ ಅವರು, ಓದು ಮತ್ತು ಜ್ಞಾನಾರ್ಜನೆಯನ್ನೇ ಜೀವನದ ಅಸ್ತ್ರವಾಗಿಸಿಕೊಂಡು ಶೋಷಿತರ ಏಳಿಗೆಗೆ ಶ್ರಮಿಸಿದ್ದರು ಎಂದರು.

ತಮ್ಮ ಪಾಂಡಿತ್ಯದಿಂದ ಇಡೀ ವಿಶ್ವವೇ ಗೌರವ ಕೊಡುವಂತೆ ಸಂವಿಧಾನವನ್ನು ರಚಿಸುವ ಮೂಲಕ ಅಂಬೇಡ್ಕರ್‌ ಅವರು ವಿಶ್ವರತ್ನವಾಗಿ ಹೊರಹೊಮ್ಮಿದ್ದಾರೆ. ಇಂತಹ ಮಹಾಮಾನವತಾವಾದಿಯ ಆದರ್ಶಗಳು ಹಾಗೂ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಸೀಲ್ದಾರ್ ನಾಗಯ್ಯ ಹಿರೇಮಠ ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಅವರು ಮಾತನಾಡಿದರು.

ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ತಾಪಂ ಇಓ ಮಹ್ಮದ್ ಅಕ್ರಂ ಪಾಷಾ, ಸಿಪಿಐ ಎಸ್.ಸಿ.ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಪಿಎಸ್ಐ ಮಂಜುನಾಥ ರೆಡ್ಡಿ, ಅಬಕಾರಿ ಎಸ್ಐ ವನೀತಾ ಸೀತಾಳೆ, ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್, ಟಿಎಪಿಸಿಎಂಎಸ್ ಅಧ್ಯಕ್ಷ ದೇವಿಂದ್ರ ಅರಣಕಲ್, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೆಣ್ಣೂರಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಜಯಂತಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ಮುಖಂಡರಾದ ದೇವಿಂದ್ರ ಕುಮಸಿ, ಜಗನ್ನಾಥ ಮುಡುಬೂಳಕರ್, ಮಲ್ಲಿಕಾರ್ಜುನ ಮುಡುಬೂಳಕರ್, ಸಂಜಯ ಬುಳಕರ್, ಶ್ರೀಕಾಂತ್ ಸಿಂಧೆ, ಸೂರಜ್ ಕಲ್ಲಕ್, ಮಹಾಂತೇಶ್ ಬೊಮ್ಮನಳ್ಳಿ, ರಾಮಲಿಂಗ ಬಾನರ್, ಲೋಹಿತ್ ಮುದ್ದಡಗಿ, ತುಕಾರಾಮ ನಾಯಕ, ವಿಠಲ್ ಕಟ್ಟಿಮನಿ, ಶಿವಮೂರ್ತಿ ಪಾಮನೂರ, ಪ್ರಜ್ವಲ್ ಬೋಧಿ, ರಾಜು ಬುಳಕರ್, ವಿಜಯ್ ಕಲ್ಲಕ್, ಸಾಗರ್ ಚಿಟ್ಟೆಕಾರ್, ಕಾರ್ತಿಕ್ ಕಲ್ಲಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅಣದೂರ ಬುದ್ಧ ವಿಹಾರದ ಮಾತಾಜಿ ಅರ್ಚಸ್ಮತಿ ಬುದ್ಧ ವಂದನೆ ಸಲ್ಲಿಸಿದರು. ಉದಯಕುಮಾರ್ ಸಾಗರ, ನಾಗೇಂದ್ರ ಬುರ್ಲಿ, ನವಾಬ್ ಮುನ್ಸಿ ಸಂಗಡಿಗರು ಕ್ರಾಂತಿ ಗೀತೆ ಹಾಡಿದರು, ಬಿಇಓ ಶಶಿಧರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ.ಶಂಕರ ಕಣ್ಣಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ನಡೆಯಿತು ಕಾರ್ಯಕ್ರಮದ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!