ಚಿತ್ತಾಪುರದಲ್ಲಿ 24 ನೇ ವರ್ಷದ ನವರಾತ್ರಿ ಉತ್ಸವ ನಿಮಿತ್ತ ದೇವಿ ಮೂರ್ತಿಯ ಭವ್ಯ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ಜಗದಂಬಾ ದೇವಿ ದೇವಸ್ಥಾನ ಹತ್ತಿರ 24 ನೇ ವರ್ಷದ ನವರಾತ್ರಿ ಉತ್ಸವ ಕಾರ್ಯಕ್ರಮದ ನಿಮಿತ್ತ ಗುರುವಾರ ದೇವಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ರೈಲ್ವೆ ಸ್ಟೇಷನ್ ನಿಂದ ಪ್ರಾರಂಭವಾದ ಮೆರವಣಿಗೆ, ಅಂಬೇಡ್ಕರ್ ವೃತ್ತ, ಜನತಾ ವೃತ್ತ, ಒಂಟಿ ಕಮಾನ್ ಮೂಲಕ ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. 9 ದಿವಸಗಳ ಕಾಲ ಪೂಜೆ ಪುನಸ್ಕಾರ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಗರ್ಭಾ ದಾಂಡಿಯಾ ನೃತ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜರುಗುತ್ತವೆ ಹಾಗೂ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಗುರುತಿಸಿ ಅವರನ್ನು ಸನ್ಮಾನ ಮಾಡಲಾಗುತ್ತದೆ ಎಂದು ಪುರಸಭೆ ಸದಸ್ಯ ಜಗದೀಶ್ ಚವ್ಹಾಣ ತಿಳಿಸಿದ್ದಾರೆ.
ಜಗನ್ಮಾತೆಯ ಮೂರ್ತಿಯ ಭವ್ಯ ಮೆರವಣಿಗೆಯಲ್ಲಿ ಭಜನೆ, ಡೊಳ್ಳು ಕುಣಿತ, ಬಂಜಾರ ಯುವತಿಯರಿಂದ ನೃತ್ಯ, ಕುಂಭ ಕಳಸ, ಡಿ ಜೆ ಸೌಂಡ್ ಯುವಕರ ಕುಣಿತ, ಬಂಜಾರ ತಾಯಂದಿರು ತಮ್ಮ ವೇಷಭೂಷದ ಮುಖಾಂತರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸ್ಟೇಷನ್ ತಾಂಡದ 8 ನಾಯಕರು ಕಾರ್ಬಾರಿ ಡಾವ್, ಸಾನ್ ಹಾಸಬಿ ನಾಸಾಬಿ ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಭೀಮಸಿಂಗ್ ಚವ್ಹಾಣ, ಅಧ್ಯಕ್ಷ ವಿನೋದ ಪವಾರ್, ಗೋಪಾಲ್ ರಾಠೋಡ ದೇವದಾಸ್ ಚವ್ಹಾಣ, ಶ್ರೀಕಾಂತ್ ರಾಥೋಡ್, ತಿರುಪತಿ ಚವ್ಹಾಣ, ಪ್ರತಾಪ್ ಚವ್ಹಾಣ, ರವಿ ಜಾಧವ, ಕಿಶನ್ ನಾಯಕ, ಪೋಮು ಚವ್ಹಾಣ, ಮೋತಿಲಾಲ್ ನಾಯಕ, ರಾಮು ನಾಯಕ, ಅಶೋಕ್ ಭೀಮಾ ನಾಯಕ, ಪ್ರವೀಣ್ ಪವಾರ್, ರಾಕೇಶ್ ಪವಾರ್, ವಿಜಯ್ ಕುಮಾರ್ ಪವರ್, ವಿಶ್ವನಾಥ್ ಚಾನು ರಾಥೋಡ್, ಜಗದೀಶ ಪವಾರ್, ಆನಂದ್ ಜಾಧವ್, ತಿರುಪತಿ ರಾಥೋಡ್, ರಾಮ್ ಚವ್ಹಾಣ, ಗಣೇಶ್ ಚವ್ಹಾಣ, ವಿಜಯಕುಮಾರ್ ಚವ್ಹಾಣ, ಕುಮಾರ್ ರಾಥೋಡ, ಆಕಾಶ್ ಚವ್ಹಾಣ, ಬಾಲರಾಜ್ ಚವ್ಹಾಣ, ವಾಸು ರಾಥೋಡ, ಜೈ ಸೇವಾಲಾಲ್ ಗ್ರೂಪ್, ಕಬಾಲಿ ಗ್ರೂಪ್, ಯಂಗ್ ಸೇವಾಲಾಲ್ ಗ್ರೂಪ್ ಯುವಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಮೆರವಣಿಯಲ್ಲಿ ಭಾಗಿಯಾಗಿದ್ದರು.