ಚಿತ್ತಾಪುರದಲ್ಲಿ ಬಸವ ಜಯಂತಿ ಅದ್ದೂರಿ ಆಚರಣೆ | ಬಸವೇಶ್ವರರ ಭಾವಚಿತ್ರದ ಜೊತೆ 70 ಜೋಡು ಎತ್ತುಗಳ ಆಕರ್ಷಕ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಆಡಳಿತ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ತಾಪುರ ಮತ್ತು ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ವತಿಯಿಂದ 893 ನೇ ಬಸವ ಜಯಂತಿ ಉತ್ಸವ ನಿಮಿತ್ತ ಪಟ್ಟಣದಲ್ಲಿ ಸೋಮವಾರ ಅದ್ದೂರಿಯಾಗಿ ನಡೆಯಿತು.
ಪ್ರಜಾ ಸೌಧದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಪೂಜೆ ಸಲ್ಲಿಸಿ ನಂತರ ಮೆರವಣಿಗೆಗೆ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಭಾವಚಿತ್ರದ ಜೊತೆ, 70 ಜೋಡು ಎತ್ತುಗಳೊಂದಿಗೆ ಆಕರ್ಷಕ ಮೆರವಣಿಗೆ ಸಾಗಿ ಬಸವೇಶ್ವರ ವೃತ್ತಕ್ಕೆ ತಲುಪಿತ್ತು. ನಂತರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಅಕ್ರಂ ಪಾಷಾ, ಸಿಪಿಐ ಎಸ್.ಸಿ.ಪಾಟೀಲ, ಪಿಎಸ್ಐ ಮಂಜುನಾಥ ರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರೆ, ಪಶು ಅಧಿಕಾರಿ ಡಾ.ಶಂಕರ ಕಣ್ಣಿ, ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ನಾಗರೆಡ್ಡಿ ಪಾಟೀಲ ಕರದಾಳ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ಜಗಣ್ಣಗೌಡ ರಾಮತೀರ್ಥ, ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ರವೀಂದ್ರ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಕಾಳಗಿ, ನೀಲಕಂಠ ಪಾಟೀಲ, ಅಶೋಕ ನಿಪ್ಪಾಣಿ, ಚಂದ್ರಶೇಖರ ಸಾತನೂರ, ಅಣ್ಣಾರಾವ ಪಾಟೀಲ ಮುಡಬೂಳ, ಶಾಂತಣ್ಣ ಚಾಳೀಕಾರ, ಚಂದ್ರುಗೌಡ ಬೆಳಗುಂಪಾ, ಆನಂದ ಪಾಟೀಲ ನರಿಬೋಳ, ಅನಿಲ್ ವಡ್ಡಡಗಿ, ದೇವಿಂದ್ರ ಅರಣಕಲ್, ಮಲ್ಲರೆಡ್ಡಿ ಗೋಪಸೇನ್, ನಾಗರಾಜ ರೇಷ್ಮಿ, ಶಾಂತಣ್ಣ ಚಾಳೀಕಾರ, ನಾಗರಾಜ ಕಡಬೂರ, ಓಂಕಾರ ರೇಷ್ಮಿ, ನೇಹಲ್ ಪಾಟೀಲ, ನಾಗರಾಜ ಹೂಗಾರ, ರಾಮರೆಡ್ಡಿ ಕೊಳ್ಳಿ, ಮಹಾಂತಗೌಡ ಪಾಟೀಲ, ಹಣಮಂತ ಸಂಕನೂರ, ರಾಮಲಿಂಗ ಬಾನರ್, ಎಸ್.ಎನ್.ಪಾಟೀಲ, ಅಂಬರೀಷ್ ಸುಲೇಗಾಂವ, ಮಹಾದೇವ ಅಂಗಡಿ, ಭೀಮರಾಯ ಹೊತಿನಮಡಿ, ರಾಜಣ್ಣ ಕರದಾಳ, ಬಸ್ಸುಗೌಡ ದಂಡಗುಂಡ, ಸಂತೋಷ ಹಾವೇರಿ, ವಿಶ್ವನಾಥ ಕುಂಬಾರ, ರಮೇಶ್ ಕಾಳನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

