Oplus_131072

ಚಿತ್ತಾಪುರದಲ್ಲಿ ಕಾಯಕ ಪ್ರಿಯಾ ಮಾದರ ಚೆನ್ನಯ್ಯ ಅವರ 975 ನೇ ಜಯಂತ್ಯೋತ್ಸವ, ಮಾದಾರ ಚೆನ್ನಯ್ಯ ಶ್ರೇಷ್ಠ ವಚನಕಾರ: ಕಮಕನೂರ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸತ್ಯ ಮತ್ತು ಶುದ್ಧಗೆ ಹೆಸರಾದ ಸಾಕ್ಷಾತ್ ಶಿವನನ್ನು ಒಲಿಸಿಕೊಂಡ ಮಾದಾರ ಚೆನ್ನಯ್ಯ ಶ್ರೇಷ್ಠ ವಚನಕಾರರಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದ ಮೈದಾನದಲ್ಲಿ ತಾಲೂಕು ಮಾದಿಗ ಸಮಾಜದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾಯಕ ಪ್ರಿಯಾ ಶ್ರೀ ಶಿವಶರಣ ಮಾದರ ಚೆನ್ನಯ್ಯ ಅವರ 975 ನೇ ಜಯಂತ್ಯೋತ್ಸವ ಹಾಗೂ ಮಾದಿಗ ಜನ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಕಾಣುವ ಹಾಗೂ ಅತ್ಯಂತ ಪ್ರಾಮಾಣಿಕವಾದ ಏಕೈಕ ಸಮಾಜ ಅದು ಮಾದಾರ ಸಮಾಜ ಎಂದು ಹೇಳಿದರು. ಮಾದಿಗ ಸಮಾಜಕ್ಕೆ ರಾಜಕೀಯದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಮಾದಾರ ಚೆನ್ನಯ್ಯ ಅವರ 10 ವಚನಗಳು ಲಭಿಸಿವೆ ಎಂದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಮಾದಿಗರ ಒಗ್ಗಟ್ಟು ಹಾಗೂ ಸಂಘಟನೆಯಿಂದ ಒಳ ಮೀಸಲಾತಿ ಜಾರಿ ವಿಷಯ ಇಂದು ಮುಖ್ಯವಾಹಿನಿಗೆ ಬಂದಿದೆ. ಒಳ ಮೀಸಲಾತಿ ಕಡಿಮೆ ಆದರೆ ಮುಂದಿನ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ, ಹೀಗಾಗಿ ಸಮೀಕ್ಷೆಗೆ ಮನೆಗೆ ಬಂದಾಗ ಜಾತಿಯ ನಿಖರವಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು ಹೇಳಿದರು.

ನ್ಯಾಯವಾದಿ ಚಂದ್ರಶೇಖರ ಅವಂಟಿ, ಜಿಡಿಎ ಮಾಜಿ ಸದಸ್ಯ ಶ್ಯಾಮ್ ನಾಟೀಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಡಿಎಂಎಸ್ಎಸ್ ರಾಜ್ಯಾಧ್ಯಕ್ಷ ಲಿಂಗರಾಜ್ ತಾರಫೈಲ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಅವರು ಮಾತನಾಡಿದರು.

ಪುರಸಭೆ ಸದಸ್ಯೆ ಸುಶೀಲಾಬಾಯಿ ಹೊಸ್ಸುರಕರ್, ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಬಾಬು ಜಗಜೀವನರಾಂ ಸಮಿತಿ ಅಧ್ಯಕ್ಷ ರಾಜಣ್ಣ ಕರದಾಳ, ಪಿಎಸ್ಐ ಚಂದ್ರಾಮಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್,  ಶ್ರೀಕಾಂತ್ ಹೊಸ್ಸಳ್ಳಿಕರ್, ಮಹಾಂತೇಶ್ ಬೊಮ್ಮನಳ್ಳಿ, ಮಾರುತಿ ಹುಳಗೋಳಕರ್, ಸಾಬಣ್ಣ ಹೋಳಿ, ಸಾಬಣ್ಣ ಪೇಂಟರ್, ಭೀಮರಾಯ ದೊಡ್ಡಮನಿ, ಆನಂದ ಮೊಗಲಿ, ಬಸವರಾಜ ಭೀಮನಳ್ಳಿ, ರವಿ ಅಳ್ಳೋಳ್ಳಿ, ನಾಗೇಶ್ ಹಲಗಿ ಸೇರಿದಂತೆ ಇತರರು ಇದ್ದರು.

ಜಯಂತಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಕೃತಿ ಮತ್ತು ಮಹಾಲಕ್ಷ್ಮೀ ಅವರು ಪ್ರಾರ್ಥಿಸಿದರು, ಜಯಂತಿ ಸಮಿತಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಸ್ವಾಗತಿಸಿದರು, ದೇವಪ್ಪ ನಂದೂರಕರ್ ನಿರೂಪಿಸಿದರು. ಉಪಾಧ್ಯಕ್ಷ ದೇವಿಂದ್ರ ಹಾದಿಮನಿ ವಂದಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾದಾರ ಚೆನ್ನಯ್ಯ ನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!